Video: ಶ್ರೀಲಂಕಾದಲ್ಲಿ ಧಾರಾಕಾರ ಮಳೆ, ಪ್ರವಾಹ, ಭೂಕುಸಿತ, 50ಕ್ಕೂ ಹೆಚ್ಚು ಮಂದಿ ಸಾವು
ಶ್ರೀಲಂಕಾದ್ಯಂತ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಹಾಗೂ ಭೂಕುಸಿತದಿಂದ ಇಲ್ಲಿಯವರೆಗೆ 50ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿರುವುದರಿಂದ ಶ್ರೀಲಂಕಾ ಶುಕ್ರವಾರ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳನ್ನು ಮುಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾದಲ್ಲಿ ಕಳೆದ ವಾರವೇ ಹವಾಮಾನ ಸ್ಥಿತಿ ತೀರಾ ಹಾಳಾಗಿತ್ತು, ಗುರುವಾರದಿಂದ ತೀರಾ ಹದಗೆಟ್ಟಿದೆ. ಭಾರಿ ಮಳೆಯಿಂದಾಗಿ ಮನೆಗಳು, ಹೊಲಗಳು, ರಸ್ತೆಗಳು ಜಲಾವೃತವಾಗಿವೆ.
ಕೊಲಂಬೊ, ನವೆಂಬರ್ 28: ಶ್ರೀಲಂಕದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಹಾಗೂ ಭೂಕುಸಿತದಿಂದ ಇಲ್ಲಿಯವರೆಗೆ 50ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿರುವುದರಿಂದ ಶ್ರೀಲಂಕಾ ಶುಕ್ರವಾರ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳನ್ನು ಮುಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಕಳೆದ ವಾರವೇ ಹವಾಮಾನ ಸ್ಥಿತಿ ತೀರಾ ಹಾಳಾಗಿತ್ತು, ಗುರುವಾರದಿಂದ ತೀರಾ ಹದಗೆಟ್ಟಿದೆ. ಭಾರಿ ಮಳೆಯಿಂದಾಗಿ ಮನೆಗಳು, ಹೊಲಗಳು, ರಸ್ತೆಗಳು ಜಲಾವೃತವಾಗಿವೆ. ಹಾಗೆಯೇ ಭೂಕುಸಿತಗಳು ಕೂಡ ಸಂಭವಿಸಿವೆ. ರಾಜಧಾನಿ ಕೊಲಂಬೊದಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ (186 ಮೈಲುಗಳು) ದೂರದಲ್ಲಿರುವ ಬದುಲ್ಲಾ ಮತ್ತು ನುವಾರ ಎಲಿಯಾಗಳ ಮಧ್ಯ ಪರ್ವತ ಚಹಾ ಬೆಳೆಯುವ ಪ್ರದೇಶಗಳಲ್ಲಿ ಗುರುವಾರ ಸಂಭವಿಸಿದ ಭೂಕುಸಿತಗಳಲ್ಲಿ 25 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

