ಶ್ರೀ ತೀರ್ಥ ರಾಮೇಶ್ವರ ಕೇವಲ ಕೇವಲ ಪುಣ್ಯಕ್ಷೇತ್ರವಲ್ಲ, ಹಲವಾರು ರೋಗಗಳನ್ನು ವಾಸಿ ಮಾಡುವ ನೀರಿನ ಹೊಂಡವೂ ಇಲ್ಲಿದೆ!

ಈ ಹೊಂಡದ ವೈಶಿಷ್ಟ್ಯತೆ ಎಂದರೆ, ಇಲ್ಲಿ ವರ್ಷಪೂರ್ತಿ ನೀರು ಸಿಗುತ್ತದೆ, ಮತ್ತು ನೀರಿನ ಮಟ್ಟ ಯಾವತ್ತೂ ಹೆಚ್ಚು ಕಡಿಮೆ ಆಗುವುದಿಲ್ಲ. ಇದರ ಸುತ್ತಮುತ್ತ ಇರುವ ಹೊಂಡಗಳು, ಕೆರೆ-ಕುಂಟೆಗಳು ಅನಾವೃಷ್ಟಿಯ ಸಂದರ್ಭದಲ್ಲಿ ಬತ್ತಿದರೂ ಈ ಹೊಂಡ ಮಾತ್ರ ಬತ್ತದು

ದಾವಣಗೆರೆ ಜಲ್ಲೆಯ ಹೊನ್ನಾಳಿಯಿಂದ 21 ಕಿಲೋಮೀಟರ್ ದೂರವಿರುವ ಮತ್ತು ಬ್ರಹ್ಮ ಮಂದಿರವೆಂದು ಕರೆಸಿಕೊಳ್ಳುವ ಶ್ರೀ ತೀರ್ಥ ರಾಮೇಶ್ವರ ಸುಂದರ ದೇವಸ್ಥಾನನ ಕರ್ನಾಟಕದ ಒಂದು ಪುಣ್ಯ ಕ್ಷೇತ್ರವೂ ಹೌದು. ಹಾಗೆ ನೋಡಿದರೆ, ಬ್ರಹ್ಮ ದೇವಸ್ಥಾನಗಳು ಬಹಳ ವಿರಳ. ಮತ್ತೂ ಕೆಲ ವಿರಳ ಅಂಶಗಳು ಶ್ರೀ ತೀರ್ಥ ರಾಮೇಶ್ವರ ಗುಡಿಯನ್ನು ಮತ್ತಷ್ಟು ವಿಶೇಷವಾಗಿಸಿವೆ. ದೇವಸ್ಥಾನದ ಆವರಣದಲ್ಲಿ, ನೀರಿನ ಹೊಂಡವೊಂದಿದ್ದು ಅದನ್ನು ಕಾಶಿ ಗಂಗಾ ನೀರಿನ ಹೊಂಡ ಅಂತ ಕರೆಯುತ್ತಾರೆ. ಈ ಹೊಂಡದ ಹಿಂದೆ ಒಂದು ಕತೆಯಿದೆ. ಸೀತೆಗೆ ನೀರಿನ ದಾಹವಾದಾಗ ಶ್ರೀರಾಮನು ತನ್ನ ಬಾಣದಿಂದ ಒಂದು ನೈಸರ್ಗಿಕ ಕಾರಂಜಿ ಪುಟಿಯುವಂತೆ ಮಾಡಿದನಂತೆ.

ಈ ಹೊಂಡದ ವೈಶಿಷ್ಟ್ಯತೆ ಎಂದರೆ, ಇಲ್ಲಿ ವರ್ಷಪೂರ್ತಿ ನೀರು ಸಿಗುತ್ತದೆ, ಮತ್ತು ನೀರಿನ ಮಟ್ಟ ಯಾವತ್ತೂ ಹೆಚ್ಚು ಕಡಿಮೆ ಆಗುವುದಿಲ್ಲ. ಇದರ ಸುತ್ತಮುತ್ತ ಇರುವ ಹೊಂಡಗಳು, ಕೆರೆ-ಕುಂಟೆಗಳು ಅನಾವೃಷ್ಟಿಯ ಸಂದರ್ಭದಲ್ಲಿ ಬತ್ತಿದರೂ ಈ ಹೊಂಡ ಮಾತ್ರ ಬತ್ತದು. ಪವಿತ್ರ ಕಾಶಿ ಕ್ಷೇತ್ರದಿಂದ ಇಲ್ಲಿಗೆ ನೀರು ಹರಿದು ಬರುತ್ತದೆ ಎಂದು ಹೇಳಲಾಗುತ್ತದೆ. ಹೊಂಡದ ನೀರು ಅತ್ಯಂತ ಶುದ್ಧವಾಗಿದ್ದು, ಅದರಲ್ಲಿ ಮಾಂತ್ರಿಕ ಶಕ್ತಿಗಳು ಅಡಗಿವೆ ಎಂದು ಇಲ್ಲಿಗೆ ಬರುವ ಭಕ್ತಾದಿಗಳು ಹೇಳುತ್ತಾರೆ.

ದೇವಸ್ಥಾನದಲ್ಲಿರುವ ಬ್ರಹ್ಮದೇವನಿಗೆ ನಾಲ್ಕು ಕೈಗಳದ್ದು ಒಂದರಲ್ಲಿ ಕನ್ನಡಿಯಿದೆ. ಆ ಕನ್ನಡಿಯಲ್ಲಿ ವಿಗ್ರಹ ಹಿಂಭಾಗದ ತಲೆ ಕಾಣುತ್ತದೆ.

ಈ ದೇವಸ್ಥಾನವನ್ನು ಒಂದು ಚಿಕ್ಕ ಬೆಟ್ಟದ ಮೇಲೆ ಮತ್ತು ಪ್ರಶಸ್ತವಾದ ಹುಲ್ಲುಗಾವಲಿನಿಂದ ಕೂಡಿರುವ ರಮ್ಮವಾದ ಸ್ಥಳದಲ್ಲಿ ಕಟ್ಟಲಾಗಿದೆ. ದೇವಸ್ಥಾನದಲ್ಲಿರುವ ಶಿವಲಿಂಗ ಉದ್ಭವ ಮೂರ್ತಿಯ ರೂಪದಲ್ಲಿದೆ. ಇಲ್ಲಿ ಎರಡು ನಂದಿಗಳಿರುವುದು ಗುಡಿಯ ಮತ್ತೊಂದು ವೈಶಿಷ್ಟ್ಯವಾಗಿದೆ. ಎಲ್ಲ ಶಿವಾಲಯಗಳಲ್ಲಿ ಕೇವಲ ಒಂದು ನಂದಿ ಮಾತ್ರ ಇರುತ್ತದೆ.

ಇಲ್ಲಿಗೆ ಬರುವ ಭಕ್ತಾದಿಗಳಿಗೆ ಬ್ರಹ್ಮ ಮತ್ತು ಶಿವನಿಗೆ ಪೂಜೆ ಸಲ್ಲಿಸುವುದು ಮುಖ್ಯವೇ, ಆದರೆ ಅಷ್ಟೇ ಮುಖ್ಯವಾದದ್ದು ಹೊಂಡದ ಪವಿತ್ರ ಜಲವನ್ನು ಸೇವಿಸುವುದಾಗಿದೆ. ಈ ನೀರಿಗೆ ಹಲವಾರು ರೋಗಗಳನ್ನು ವಾಸಮಾಡುವ ಗುಣವಿದೆಯಂತೆ. ಇದೇ ನೀರಿನಿಂದ ಸ್ನಾನ ಮಾಡಿದರೆ, ಚರ್ಮ ರೋಗಗಳು ಮತ್ತು ದೇಹದ ಬೇನೆಗಳು ವಾಸಿಯಾಗುತ್ತವಂತೆ.

ಇದನ್ನೂ ಓದಿ:  ‘ನನಗೆ ಈ ಟಾಯ್ಲೆಟ್​ನ ಗೀಳು ಹತ್ತಿದೆ ಎಂದ ಸೋನಮ್​ ಕಪೂರ್’​; ವಿಡಿಯೋ ವೈರಲ್

Click on your DTH Provider to Add TV9 Kannada