ಶ್ರೀರಾಮುಲು ವರ್ಣರಂಜಿತ ವ್ಯಕ್ತಿ, ನಾನು ಬ್ಲ್ಯಾಕ್ ಅಂಡ್ ವ್ಹೈಟ್: ಸಿ ಟಿ ರವಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
ಶ್ರೀರಾಮುಲು ಅವರು ಈಸ್ಟ್ಮನ್ ಕಲರ್ ಅಂದರೆ ವರ್ಣರಂಜಿತ ವ್ಯಕ್ತಿ, ನಾನು ಬ್ಲ್ಯಾಕ್ ಅಂಡ್ ವ್ಹೈಟ್, ಹಾಗಾಗಿ ಮುಖ್ಯಮಂತ್ರಿಯಾಗುವ ಆಸೆಯ ಬಗ್ಗೆ ಶ್ರೀರಾಮುಲು ಅವರನ್ನೇ ಕೇಳಿ ಎಂದು ರವಿ ಹೇಳಿದರು.
Bengaluru: ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿಯಾಗೋದು ತಮಗೂ ಇಷ್ಟ ಅಂತ ಬಿ ಶ್ರೀರಾಮುಲು (B Sriramulu) ಹೇಳಿದ್ದು ಶ್ರೀರಾಮುಲುಗೆ ಮುಖ್ಯಮಂತ್ರಿಯಾಗುವಾಸೆ ಇದೆ ಅಂತ ಸಿದ್ದರಾಮಯ್ಯ ಹೇಳಿದ್ದು ಬಿಜೆಪಿಗೆ ತೀರಾ ಇರುಸು ಮುರುಸು ಉಂಟುಮಾಡಿದೆ. ಬೆಂಗಳೂರಲ್ಲಿ ಮಂಗಳವಾರ ಪತ್ರಿಕಾ ಗೋಷ್ಟಿಯೊಂದರಲ್ಲಿ ಮಾತಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ (CT Ravi) ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಿದಾಗ, ‘ಶ್ರೀರಾಮುಲು ಅವರು ಈಸ್ಟ್ಮನ್ ಕಲರ್ ಅಂದರೆ ವರ್ಣರಂಜಿತ ವ್ಯಕ್ತಿ, ನಾನು ಬ್ಲ್ಯಾಕ್ ಅಂಡ್ ವ್ಹೈಟ್, ಹಾಗಾಗಿ ಮುಖ್ಯಮಂತ್ರಿಯಾಗುವ ಆಸೆಯ ಬಗ್ಗೆ ಶ್ರೀರಾಮುಲು ಅವರನ್ನೇ ಕೇಳಿ’ ಎಂದು ಹೇಳಿದರು.