ಲಂಚ ಕೊಡದಿದ್ದರೆ ಗನ್ನಿಂದ ಸುಟ್ಟು ಹಾಕ್ತೀನಿ ಅಂತ ಲಾರಿ ಚಾಲಕ ಮತ್ತು ಕ್ಲೀನರ್ ಗೆ ಮಲೆಮಹದೇಶ್ವರ ವನ್ಯಜೀವಿಧಾಮದ ಸಿಬ್ಬಂದಿ ಹೆದರಿಸಿರುವ ವಿಡಿಯೋ ವೈರಲ್!

ಲಂಚ ಕೊಡದಿದ್ದರೆ ಗನ್ನಿಂದ ಸುಟ್ಟು ಹಾಕ್ತೀನಿ ಅಂತ ಲಾರಿ ಚಾಲಕ ಮತ್ತು ಕ್ಲೀನರ್ ಗೆ ಮಲೆಮಹದೇಶ್ವರ ವನ್ಯಜೀವಿಧಾಮದ ಸಿಬ್ಬಂದಿ ಹೆದರಿಸಿರುವ ವಿಡಿಯೋ ವೈರಲ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 16, 2022 | 4:09 PM

ಈ ಸಿಬ್ಬಂದಿಯ ಹೆಸರು ಮೋಹನ್ ಅಂತ ಗೊತ್ತಾಗಿದೆ. ಅವನು ಬೆದರಿಕೆ ಹಾಕುವುದನ್ನು ಲಾರಿ ಚಾಲಕ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಚಾಮರಾಜನಗರ: ಮಲೆಮಹದೇಶ್ವರ (Malemahdeshwara) ವನ್ಯಜೀವಿ ಧಾಮದ ಸಿಬ್ಬಂದಿಯೊಬ್ಬ ಚಾಮರಾಜನಗರ ಹನೂರು ತಾಲ್ಲೂಕಿನ ಪಾಲಾರ್ (Palar) ಚೆಕ್ ಪೋಸ್ಟ್ ಬಳಿ ಅಲ್ಲಿಂದ ಸಾಗಿ ಹೋಗುತ್ತಿದ್ದ ಲಾರಿಯೊಂದರ ಚಾಲಕ ಮತ್ತು ಕ್ಲೀನರ್ ಗೆ ರೂ. 100 ಲಂಚ ಕೊಡದಿದ್ದರೆ ಗನ್ ನಿಂದ ಸುಟ್ಹಾಕ್ತೀನಿ ಅಂತ ಆವಾಜ್ ಹಾಕಿದ ವಿಡಿಯೋ ವೈರಲ್ ಅಗಿದೆ ಮಾರಾಯ್ರೇ. ಈ ಸಿಬ್ಬಂದಿಯ ಹೆಸರು ಮೋಹನ್ (Mohan) ಅಂತ ಗೊತ್ತಾಗಿದೆ. ಅವನು ಬೆದರಿಕೆ ಹಾಕುವುದನ್ನು ಲಾರಿ ಚಾಲಕ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.