‘ಆರ್ಆರ್ಆರ್’ ಸ್ವಾಗತಕ್ಕೆ ಹೇಗಿದೆ ಸಿದ್ಧತೆ?; ಇಲ್ಲಿದೆ ವಿಡಿಯೋ
RRR ಸಿನಿಮಾದ ಬಹುತೇಕ ಶೋನ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಗಳಿಕೆ ವಿಚಾರದಲ್ಲಿ ‘ಬಾಹುಬಲಿ 2’ ಸಿನಿಮಾ ದಾಖಲೆಯನ್ನು ಮುರಿದರೂ ಅಚ್ಚರಿ ಏನಿಲ್ಲ. ಈ ಸಿನಿಮಾಗೆ ಸಿದ್ಧತೆ ಹೇಗಿದೆ? ಆ ಪ್ರಶ್ನೆಗೆ ಈ ವಿಡಿಯೋದಲ್ಲಿದೆ ಉತ್ತರ.
ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸೋಕೆ ರೆಡಿ ಆಗಿದೆ. ಈ ಸಿನಿಮಾ ಮೊದಲ ದಿನ (ಮಾರ್ಚ್ 25) ಬೆಂಗಳೂರಿನಲ್ಲಿ ಒಂದೇ 600ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ. ಇನ್ನು ರಾಜ್ಯದ ನಾನಾ ಕಡೆಗಳಲ್ಲಿ ಈ ಸಿನಿಮಾದ ಪ್ರೀ-ಟಿಕೆಟ್ ಬುಕಿಂಗ್ ಜೋರಾಗಿ ಸಾಗುತ್ತಿದೆ. ಇನ್ನು, ತೆಲುಗು ಚಿತ್ರೋದ್ಯಮದ ಕೇಂದ್ರಬಿಂದು ಹೈದರಾಬಾದ್ನಲ್ಲಿ (Hyderabad) ಈ ಚಿತ್ರಕ್ಕೆ 1000ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಇದರಲ್ಲಿ ಬಹುತೇಕ ಶೋನ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಸಿನಿಮಾ ಸೃಷ್ಟಿ ಮಾಡುತ್ತಿರುವ ಅಬ್ಬರ ನೋಡಿದರೆ ಒಳ್ಳೆಯ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ. ಗಳಿಕೆ ವಿಚಾರದಲ್ಲಿ ‘ಬಾಹುಬಲಿ 2’ ಸಿನಿಮಾ (Bahubali 2) ದಾಖಲೆಯನ್ನು ಮುರಿದರೂ ಅಚ್ಚರಿ ಏನಿಲ್ಲ. ಈ ಸಿನಿಮಾಗೆ ಸಿದ್ಧತೆ ಹೇಗಿದೆ? ಆ ಪ್ರಶ್ನೆಗೆ ಈ ವಿಡಿಯೋದಲ್ಲಿದೆ ಉತ್ತರ.
ಇದನ್ನೂ ಓದಿ: ‘ಆರ್ಆರ್ಆರ್’ ಪ್ರೀ-ರಿಲೀಸ್ ವೇದಿಕೆ ಮೇಲೆ ರಾಜಮೌಳಿಗೆ ಶಿವಣ್ಣ ವಿಶೇಷ ಮನವಿ
ಗಳಿಕೆ ವಿಚಾರದಲ್ಲಿ ‘ಬಾಹುಬಲಿ 2’ ದಾಖಲೆ ಮುರಿಯಲಿದೆ ‘RRR’? 8,000 ಥಿಯೇಟರ್ನಲ್ಲಿ ರಾಜಮೌಳಿ ಸಿನಿಮಾ