ತಿರುಪತಿ ತಿರಮಲದಲ್ಲಿ ಕಾಲ್ತುಳಿತ: ಅಸಲಿಗೆ ಬುಧವಾರ ರಾತ್ರಿ ನಡೆದಿದ್ದೇನು? ಇಲ್ಲಿದೆ ವಿವರ
ಟೋಕನ್ ಕಲೆಕ್ಟ್ ಮಾಡಿಕೊಳ್ಳಲು ಭಕ್ತರೆಲ್ಲ ಶಾಲೆಯ ಬಳಿಯಿರುವ ಪದ್ಮಾವತಿ ಪಾರ್ಕ್ನಲ್ಲಿ ನೆರೆದಿದ್ದರು. ಮಹಿಳೆಯೊಬ್ಬರಿಗೆ ಉಸಿರಾಟದ ಸಮಸ್ಯೆ ಎದುರಾದಾಗ ಪೊಲೀಸರು ಅವರ ನೆರವಿಗೆ ಧಾವಿಸಿದ್ದಾರೆ. ಅದನ್ನು ಟೋಕನ್ ನೀಡುವ ಕೆಲಸ ಶುರುವಾಗಿದೆಯೆಂದು ಭಕ್ತರು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಪಾರ್ಕಿನ ಗೇಟ್ ಬಳಿ ನೂಕುನುಗ್ಗಲು ಮತ್ತು ಕಾಲ್ತುಳಿತ ಉಂಟಾಗಿದೆ.
ತಿರುಪತಿ: ತಿರುಪತಿಯ ತಿರುಮಲದಲ್ಲಿ ಬುಧವಾರ ರಾತ್ರಿ ಸುಮಾರು 8 ಗಂಟೆಗೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ 6 ಭಕ್ತಾದಿಗಳು ಮೃತಪಟ್ಟು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಮ್ಮ ವರದಿಗಾರ ಸ್ಥಳವನ್ನು ತಲುಪಿ ಅಲ್ಲ್ಲಿ ನಡೆದಿದ್ದೇನು ಅನ್ನೋದನ್ನು ವಿವರಿಸುತ್ತಿದ್ದಾರೆ. ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ಗಳನ್ನು ಹಂಚುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ದುರಂತ ಜರುಗಿದೆ. ಭಕ್ತರಿಗೆ ಟೋಕನ್ಗಳನ್ನು ವಿತರಿಸಲು 9 ಸ್ಥಳಗಳಲ್ಲಿ 94 ಕೌಂಟರ್ಗಳ ಏರ್ಪಾಟು ಮಾಡಲಾಗಿತ್ತು ಮತ್ತು ಬೈರಾಗಿಪಟ್ಟಣದ ರಾಮಾನಾಯ್ಡು ಹೈಸ್ಕೂಲ್ ನಲ್ಲಿದ್ದ ಕೌಂಟರ್ ಬಳಿ ನೂಕುನುಗ್ಗಲು ಮತ್ತು ಕಾಲ್ತುಳಿತ ಸಂಭವಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಿರುಪತಿ ಕಾಲ್ತುಳಿತ: ಬಳ್ಳಾರಿ ಮೂಲದ ಮಹಿಳೆ ಸಾವು
Published on: Jan 09, 2025 11:02 AM