Loading video

ಮಹಾಕುಂಭಮೇಳದಲ್ಲಿ ವಿಜಯೇಂದ್ರನೂ ಭಾಗಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

|

Updated on: Feb 13, 2025 | 5:13 PM

ಇವತ್ತು ಬೆಳಗ್ಗೆಯೇ ವಿಜಯೇಂದ್ರ ಅವರ ವಿರೋಧೀ ಬಣದಲ್ಲಿ ಗುರುತಿಸಿಕೊಂಡಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸತ್ತಿರುವ ವಿಜಯೇಂದ್ರಗೆ ಕುಂಭಮೇಳದಲ್ಲಿ ಭಾಗಿಯಾಗಿದ್ದು ಮನಸ್ಸಿಗೆ ನೆಮ್ಮದಿ ನೀಡಿರಬಹುದು. ಆದರೆ ಅವರೊಂದಿಗೆ ಯಾರೆಲ್ಲ ಹೋಗಿದ್ದಾರೆ ಅನ್ನೋದು ಗೊತ್ತಾಗಲಿಲ್ಲ.

ಪ್ರಯಾಗ್​ರಾಜ್ (ಉತ್ತರಪ್ರದೇಶ): ಬಿಜೆಪಿ ಕರ್ನಾಟಕ ಯುನಿಟ್ ಅಧ್ಯಕ್ಷ ಬಿವೈ ವಿಜಯೇಂದ್ರ ಇಂದು ಉತ್ತರ ಪ್ರದೇಶದಲ್ಲಿ ಒಂದು ತಿಂಗಳು ಅವಧಿಯಿಂದ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡರು. ಪ್ರಯಾಗ್​ರಾಜ್ ಬಳಿಯಿರುವ ತ್ರಿವೇಣಿ ಸಂಗಮದಲ್ಲಿ ವಿಜಯೇಂದ್ರ ಪುಣ್ಯಸ್ನಾನ ಮಾಡಿದರು. ಸಂಗಮದಲ್ಲಿ ಅವರು ಬಹಳ ದೂರದವರೆಗೆ ಹೋಗಿದ್ದಾರೆ. ರಾಜ್ಯದ ಬಹಕಷ್ಟು ನಾಯಕರು ಸೊಂಟದಮಟ್ಟ ನೀರಿರುವ ಜಾಗದಲ್ಲಿ ಪುಣ್ಯಸ್ನಾನ ಮಾಡಿದರೆ ವಿಜಯೇಂದ್ರ ನೀರು ಎದೆಮಟ್ಟ ಇರುವ ಕಡೆ ಹೋಗಿ ಸಂಸ್ಕಾರ ಪೂರೈಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಹಾಕುಂಭಮೇಳದಲ್ಲಿ ರವಿಶಂಕರ್ ಗುರೂಜಿಯೊಂದಿಗೆ ಸತ್ಸಂಗ, ಧ್ಯಾನ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ