ಸಾಲದ ಮೊತ್ತವನ್ನು ನಬಾರ್ಡ್ ಕಡಿಮೆ ಮಾಡಿದ್ದು ರೈತರಿಗೆ ಸಂಕಷ್ಟ ತಂದೊಡ್ಡಲಿದೆ: ಚಲುವರಾಯಸ್ವಾಮಿ
ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತಿರುವ ರೀತಿಯ ಬಗ್ಗೆ ಚಲುವರಾಯಸ್ವಾಮಿ ಖೇದ ವ್ಯಕ್ತಪಡಿಸಿದರು. ಹಿರಿಯರು ಮತ್ತು ಹಿಂದೆ ಡಿಸಿಎಂ ಕೂಡ ಆಗಿದ್ದ ಅಶೋಕ ತಾನು ವಿರೋಧ ಪಕ್ಷದ ನಾಯಕ ಅನ್ನೋ ಕಾರಣಕ್ಕೆ ಮಾತಾಡುತ್ತಿರುವಂತಿದೆ, ಅವರು ತನ್ನ ಸ್ನೇಹಿತರು ನಿಜ ಅದರೆ ಅವರ ಮಾತಿನ ವೈಖರಿ ಮನಸ್ಸಿಗೆ ನೋವನ್ನುಂಟು ಮಾಡುತ್ತಿದೆ ಎಂದು ಸಚಿವ ಹೇಳಿದರು.
ಮಂಡ್ಯ: 87 ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಸಚಿವ ಎನ್ ಚಲುವರಾಯಸ್ವಾಮಿ, ನಿನ್ನೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ದೆಹಲಿಗೆ ತೆರಳಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ನಬಾರ್ಡ್ ರಾಜ್ಯಕ್ಕೆ ನೀಡುವ ಸಾಲದ ಮೊತ್ತವನ್ನು ಶೇಕಡ 58ರಷ್ಟು ಕಡಿಮೆ ಮಾಡಿರುವುದನ್ನು ಚರ್ಚಿಸಿ ರಾಜ್ಯರ ರೈತರಿಗೆ ಆಗುವ ಅನ್ಯಾಯವನ್ನು ವಿವರಿಸಲಾಗಿದೆ ಎಂದರು. ಪ್ರತಿ ವರ್ಷ ಸಾಲದ ಮೊತ್ತವನ್ನು ಹೆಚ್ಚಿಸಿಕೊಂಡು ಹೋಗುವ ನಬಾರ್ಡ್ ಈ ಬಾರಿ ರಾಜ್ಯಕ್ಕೆ ಕಳೆದ ಸಲ ನೀಡಿದ ಮೊತ್ತದಲ್ಲಿ ₹3,500 ಕೋಟಿಗಳನ್ನು ಕಡಿತ ಮಾಡಿದೆ, ಆದರೆ ರಾಜ್ಯಕ್ಕೆ ₹ 9,000 ಕೋಟಿಗಳ ಅವಶ್ಯಕತೆಯಿದೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆಪರೇಶನ್ ಕಮಲದಿಂದಲೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಬಿದ್ದಿತ್ತು: ಚಲುವರಾಯಸ್ವಾಮಿ