ಮಂಗಳೂರು: ಫ್ಯಾಷನ್ ಪ್ಯಾಂಟ್ ಧರಿಸಿದವನ ಹಿಡಿದಿಟ್ಟು ಹೊಲಿಗೆ ಹಾಕಿದ ಪುಂಡರು: ವಿಡಿಯೋ ವೈರಲ್ ಆದ ಬೆನ್ನಲ್ಲೇ ಯುವಕ ಆತ್ಮಹತ್ಯೆಗೆ ಯತ್ನ
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮಾರುಕಟ್ಟೆಗೆ ವಿನೂತನ ಶೈಲಿಯಲ್ಲಿ (ಹರಿದ ಜೀನ್ಸ್) ಪ್ಯಾಂಟ್ ಧರಿಸಿ ಬಂದಿದ್ದ ಯುವಕನ ಪ್ಯಾಂಟಿಗೆ ಪುಂಡರು ಡಬ್ಬಣದಿಂದ ಹೊಲಿಗೆ ಹಾಕಿದ್ದಾರೆ. ಇದರಿಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೊಲಿಗೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರು, ನವೆಂಬರ್ 22: ದಕ್ಷಿಣ ಕನ್ನಡ (Dakshin Kannada) ಜಿಲ್ಲೆ ಬೆಳ್ತಂಗಡಿಯ ಮಾರುಕಟ್ಟೆಗೆ ಯುವಕನ ಪ್ಯಾಂಟಿಗೆ ಪುಂಡರು ಡಬ್ಬಣದಿಂದ ಹೊಲಿಗೆ ಹಾಕಿದ್ದಾರೆ. ಪುಂಡರು ಪ್ಯಾಂಟಿಗೆ ಹೊಲಿಗೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ (21) ಗುರುವಾರ ಮಧ್ಯಾಹ್ನ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ವಿನೂತನ ಶೈಲಿಯ (ಹರಿದ ಜೀನ್ಸ್) ಪ್ಯಾಂಟ್ ಧರಿಸಿ ಬಂದಿದ್ದನು. ಈ ವೇಳೆ, ಮಾರುಕಟ್ಟೆಯಲ್ಲಿದ್ದ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್, ಅನೀಶ್ ಪಣಕಜೆ, ಬಾಬ್ ಜಾನ್ ಸಾಹೇಬ್, ಶಾಹಿಲ್ನನ್ನು ಅಡ್ಡ ಹಾಕಿದ್ದಾರೆ. ಬಳಿಕ ಶಾಹಿಲ್ ಅವರ ಎರಡೂ ಕೈಗಳನ್ನು ಲಾಕ್ ಮಾಡಿದ್ದಾರೆ. ನಂತರ, ಶಾಹಿಲ್ ಪ್ಯಾಂಟಿಗೆ ಡಬ್ಬಣದಿಂದ ಹೊಲಿಗೆ ಹಾಕಿದ್ದಾರೆ.
ಹೊಲಿಗೆ ಹಾಕುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಮನನೊಂದ ಶಾಹಿಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾಹಿಲ್ ಜೀವನ್ಮರಣ ಹೋರಾಟ ನಡೆಸಿದ್ದಾನೆ.

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್ನಲ್ಲಿ ಕಳೆದ ಕೊನೆಯ ಕ್ಷಣಗಳು

ಕೆಆರ್ಎಸ್ ಕ್ರೆಸ್ಟ್ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
