ಬಿಜೆಪಿ ಅಧಿಕಾರದಲ್ಲಿದ್ದಾಗ ವಕ್ಫ್ ಸಂಬಂಧಿತ ಗೆಜೆಟ್ ನೋಟಿಫಿಕೇಶನ್ ಯಾಕೆ ರದ್ದು ಮಾಡಲಿಲ್ಲ? ಎಂಬಿ ಪಾಟೀಲ್
ವಕ್ಫ್ ವಿರುದ್ಧ ಬಿಜೆಪಿಯ ಹೋರಾಟ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಪ್ರತಿಷ್ಠೆಯ ಕಾಳಗವಾಗಿದೆ, ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ್ ಪ್ರಯತ್ನಿಸುತ್ತಿದ್ದರೆ ಪಕ್ಷದಲ್ಲಿ ಶಾಸಕನ ಮಹತ್ವ ಕಡಿಮೆ ಮಾಡೋದರ ಮೇಲೆ ಅಧ್ಯಕ್ಷರ ಗಮನ ನೆಟ್ಟಿದೆ ಎದು ಪಾಟೀಲ್ ಹೇಳಿದರು.
ವಿಜಯಪುರ: ವಕ್ಫ್ ಬೋರ್ಡ್ನಿಂದ ರೈತರಿಗೆ ನೋಟೀಸ್ ಜಾರಿಯಾಗಿರುವ ವಿರುದ್ಧ ಬಿಜೆಪಿ ಜಿಲ್ಲಾಮಟ್ಟದಲ್ಲೂ ನಮ್ಮ ಭೂಮಿ ನಮ್ಮ ಹಕ್ಕು ಘೋಷನೆಯಡಿ ಹೋರಾಟ ಆರಂಭಿಸಿರುವುದಕ್ಕೆ ನಗರದಲ್ಲಿಂದು ಪ್ರತಿಕ್ರಿಯೆ ನೀಡಿದ ಸಚಿವ ಎಂಬಿ ಪಾಟೀಲ್, ಬಿಜೆಪಿ ರಾಜಕೀಯ ಬಿಟ್ಟು ಬೇರೇನೂ ಮಾಡುತ್ತಿಲ್ಲ, ಇಷ್ಟು ವರ್ಷ ಕುಂಭಕರ್ಣ ನಿದ್ರೆಯಲ್ಲಿದವರು ಈಗ ಎಚ್ಚೆತ್ತುಕೊಂಡಿದ್ದಾರೆ, ಗೆಜೆಟ್ ನೋಟಿಫೀಕೇಶ್ 1974ರಿಂದ ಇದೆ, ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಅದನ್ನು ರದ್ದು ಮಾಡಲಿಲ್ಲ? ಮುಸ್ಲಿಂ ಸಮುದಾಯದವರಿಗೂ ನೋಟೀಸ್ ಜಾರಿಯಾಗಿವೆ, ಕೇವಲ ಹಿಂದೂಗಳಿಗೆ ಮಾತ್ರವಲ್ಲ, ವಕ್ಫ್ ಬೋರ್ಡ್ ನಿಂತ ತಪ್ಪಾಗಿದ್ದರೆ ಅದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದಲ್ಲಿ ವಕ್ಫ್ ವಿರುದ್ಧ ಹೋರಾಟ ಆರಂಭಿಸಿದ್ದು ಯಾರು ಅನ್ನೋದು ಮುಖ್ಯವಲ್ಲ: ವಿಜಯೇಂದ್ರ
Latest Videos