Prajwal Revanna case: ಹೆಚ್ ಡಿ ರೇವಣ್ಣ ಬಗ್ಗೆ ಸರ್ಕಾರ ಮೃದು ಧೋರಣೆ ತಳೆದಿರುವುದು ಸ್ಪಷ್ಟವಾಗುತ್ತಿದೆ, ಅಪಹರಣ ಕೇಸಲ್ಲೂ ಬಂಧಿಸಿಲ್ಲ!
ಕಿಡ್ನ್ಯಾಪಿಂಗ್ ಕೇಸಲ್ಲೂ ಅವರನ್ನು ಬಂಧಿಸಲ್ವಾ ಅಂದಾಗ ಪರಮೇಶ್ವರ್ ಸಹನೆ ಕಳೆದುಕೊಂಡು, ಬಂಧನಗಳು ಆಗುತ್ತೇ ರೀ, ಎಲ್ಲ ವಿವರಗಳನ್ನು ಮಾಧ್ಯಮದವರಿಗೆ ಹೇಳಲಾಗಲ್ಲ ಅಂತ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಎಲ್ಲ ಸಂತ್ರಸ್ತೆಯರು ಮತ್ತು ಅವರಿಗಾಗಿ ಮರುಗುತ್ತಿರುವ ಕನ್ನಡಿಗರು ಅಂದುಕೊಳ್ಳುತ್ತಿರುವುದೇನೆಂದರೆ, ರೇವಣ್ಣ ಮತ್ತು ಪ್ರಜ್ವಲ್ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸರ್ಕಾರ ಇದೇ ಉಡಾಫೆ ಧೋರಣೆ ಪ್ರದರ್ಶಿಸುತ್ತಿತ್ತೇ?
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೃದು ಧೋರಣೆ ತಳೆದಿರುವುದು ಸ್ಪಷ್ಟವಾಗುತ್ತಿದೆ. ಯಾಕೆಂದರೆ, ಸಂತ್ರಸ್ತೆಯರ ದೂರು ದಾಖಲಾದ ಕೂಡಲೇ ಅರೋಪಿ ನಂಬರ್ ವನ್ ಆಗಿರುವ ಹೆಚ್ ಡಿ ರೇವಣ್ಣ (HD Revanna) ಅವರನ್ನು ಬಂಧಿಸದಿದ್ರೂ ಕನಿಷ್ಟ ಕರೆದು ವಿಚಾರಣೆ ನಡೆಸಬೇಕಿತ್ತು. ಅದರೆ, ರೇವಣ್ಣ ನಿರ್ಭೀತಿಯಿಂದ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ ಹೊಳೆನರಸೀಪುರ-ಹಾಸನ-ಬೆಂಗಳೂರು ಸುತ್ತಾಡಿಕೊಂಡಿದ್ದಾರೆ. ಇಂದು ಬೆಂಗಳೂರಲ್ಲಿ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಅವರನ್ನು ಅದೇ ಪ್ರಶ್ನೆ ಕೇಳಿದಾಗ, ಪ್ರಜ್ವಲ್ ನಂತೆ ಬೇರೆ ದೇಶಕ್ಕೆ ಹೋಗುವುದನ್ನು ತಡೆಯಲು ರೇವಣ್ಣ ಅವರಿಗೆ ನೋಟೀಸ್ ಕೊಟ್ಟಾಗಿದ್ದು ಎರಡನೇ ನೋಟೀಸ್ ಗೆ ಪ್ರತಿಕ್ರಿಯಿಸಲು ಸಾಯಂಕಾಲದವರೆಗೆ ಟೈಮಿದೆ. ಏತನ್ಮಧ್ಯೆ, ಅವರು ಮೈಸೂರು ಅಪಹರಣ ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ಕಿಡ್ನ್ಯಾಪಿಂಗ್ ಕೇಸಲ್ಲೂ ಅವರನ್ನು ಬಂಧಿಸಲ್ವಾ ಅಂದಾಗ ಪರಮೇಶ್ವರ್ ಸಹನೆ ಕಳೆದುಕೊಂಡು, ಬಂಧನಗಳು ಆಗುತ್ತೇ ರೀ, ಎಲ್ಲ ವಿವರಗಳನ್ನು ಮಾಧ್ಯಮದವರಿಗೆ ಹೇಳಲಾಗಲ್ಲ ಅಂತ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಎಲ್ಲ ಸಂತ್ರಸ್ತೆಯರು ಮತ್ತು ಅವರಿಗಾಗಿ ಮರುಗುತ್ತಿರುವ ಕನ್ನಡಿಗರು ಅಂದುಕೊಳ್ಳುತ್ತಿರುವುದೇನೆಂದರೆ, ರೇವಣ್ಣ ಮತ್ತು ಪ್ರಜ್ವಲ್ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸರ್ಕಾರ ಇದೇ ಉಡಾಫೆ ಧೋರಣೆ ಪ್ರದರ್ಶಿಸುತ್ತಿತ್ತೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆಯಾಗಲೇಬೇಕು, ಇದು ಬಿಜೆಪಿ ನಿಲುವು: ಆರ್ ಅಶೋಕ