Who will be CM? ಸಿದ್ದರಾಮಯ್ಯರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ರಾಜ್ಯ ಕುರುಬ ಸಮಾಜದ ಆಗ್ರಹ
ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಸಿಗಲು ಸಿದ್ದರಾಮಯ್ಯ ಸಹ ಬಹಳ ಪರಿಶ್ರಮವಹಿಸಿದ್ದಾರೆ. ರಾಜ್ಯದ ಇಡೀ ಕುರುಬ ಸಮಾಜ ಸಿದ್ದರಾಮಯ್ಯ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದೆ ಎಂದು ವೆಂಕಟೇಶ ಮೂರ್ತಿ ಹೇಳಿದರು
ಬೆಂಗಳೂರು: ನಿನ್ನೆ ಒಕ್ಕಲಿಗ ಸಮುದಾಯದ ಮಠಾಧೀಶರೊಬ್ಬರು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂದು ಹೇಳಿದರು. ಇವತ್ತು ಕುರುಬ ಸಮಾಜದ (Kuruba community) ಪದಾಧಿಕಾರಿಗಳು ನಗರದಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನ ಸಿಗಲು ಸಿದ್ದರಾಮಯ್ಯ (Siddaramaiah) ಸಹ ಬಹಳ ಪರಿಶ್ರಮವಹಿಸಿದ್ದಾರೆ. ರಾಜ್ಯದ ಇಡೀ ಕುರುಬ ಸಮಾಜ ಸಿದ್ದರಾಮಯ್ಯ ಬೆನ್ನೆಲುಬಾಗಿ ನಿಂತು ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಹಕಾರ ನೀಡಿದೆ. ಹಲವು ಕಡೆ ಕುರುಬ ನಾಯಕರು ಬಂಡಾಯವೆದ್ದ್ದಿದ್ದರು, ಆದರೆ ಕುರುಬ ಸಂಘದ ಪದಾಧಿಕಾರಿಗಳು ಅವರೆಲ್ಲರನ್ನು ಕಾಂಗ್ರೆಸ್ ಪರ ಕೆಲಸ ಮಾಡುವಂತೆ ಮನವೊಲಿಸಿದರು. ಹಾಗಾಗಿ, ಕುರುಬ ಸಮಾಜದ ಪ್ರತಿನಿಧಿಯಾಗಿರುವ ಸಿದ್ದರಾಮಯ್ಯನವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಹೈಕಮಾಂಡ್ ಅನ್ನು ಆಗ್ರಹಿಸುತ್ತೇವೆ ಅಂತ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೂರ್ತಿ (Venkatesh Murthy) ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos