ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರಿನ ನೈಸ್ ರಸ್ತೆ ವಿವಾದ: ಟೋಲ್ ವಿರುದ್ಧ ಸಿಡಿದೆದ್ದ ಪ್ರತಿಪಕ್ಷಗಳು

Updated on: Aug 16, 2026 | 5:36 PM

ನೈಸ್ ಸಂಸ್ಥೆಯಲ್ಲಿರುವ ಟೋಲ್ ಗೇಟ್ ರಾಜಜೀಯ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ನೈಸ್ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್​ಗಳನ್ನು ತತ್‌ಕ್ಷಣ ಜಾರಿಗೆ ಬರುವಂತೆ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಬಿಜೆಪಿ ಸಹ ಬೆಂಬಲಿಸಿದೆ.

ಬೆಂಗಳೂರು, (ಆಗಸ್ಟ್​ 16): ನೈಸ್ ಸಂಸ್ಥೆಯಲ್ಲಿರುವ ಟೋಲ್ ಗೇಟ್ ರಾಜಜೀಯ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ನೈಸ್ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್​ಗಳನ್ನು ತತ್‌ಕ್ಷಣ ಜಾರಿಗೆ ಬರುವಂತೆ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಬಿಜೆಪಿ ಸಹ ಬೆಂಬಲಿಸಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಅಶೋಕ್ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಆಗ್ರಹಕ್ಕೆ‌ ನನ್ನ ಬೆಂಬಲ ಇದೆ. ನಾನು‌ ಆ ಭಾಗದ ಶಾಸಕನಾಗಿದ್ದೆ. ನಾನೊಬ್ಬನೇ ಆಗ ಪ್ರತಿಭಟನೆ ಮಾಡಿದ್ದೆ. ಜೆ.ಎಚ್ ಪಾಟೀಲ್ ಆಗ ಉದ್ಘಾಟನೆ ಮಾಡಿದ್ರು. ಆಗ ಜೆಡಿಎಸ್ ಸರ್ಕಾರ ಇತ್ತು. ನೈಸ್ ಅನ್ನೋದು‌ ನೈಸಾಗಿ ಕರ್ನಾಟಕ ಜನತೆಯ ಲೂಟಿ ಹೊಡೆದಿದೆ. ಕೋಟ್ಯಾಂತರ ರೂಪಾಯಿ ಲೂಟಿ ಆಗಿದೆ. ಕ್ರಾಸ್ ರೋಡ್ ಗಳಿಗೆ‌ ಫ್ಲೈಓವರ್ ಮಾಡಬೇಕು ಪ್ರತಿವರ್ಷ ಟೋಲ್ ದರ ಹೆಚ್ಚಳ ಮಾಡುತ್ತಾ ಹೋಗಿದ್ದಾರೆ. ಅವತ್ತು ಕಾಂಗ್ರೆಸ್ ಸರ್ಕಾರ ಇತ್ತು ಮತ್ತೆ ಅದೇ ಸರ್ಕಾರ ಬಂದಿರುವುದಕ್ಕೆ ಶಲ್ಟರ್ ಕೊಡ್ತಿದ್ದಾರೆ. ಟೋಲ್ ತೆಗೆದು ಹಾಕಿದ್ರೆ ಜನರ ಹೊರೆ ಕಡಿಮೆ ಆಗುತ್ತೆ. ಕೋರ್ಟ್ ಆದೇಶದಂತೆ ಟೋಲ್ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More