ಸಸ್ಯಕಾಶಿ ಲಾಲ್​ಬಾಗ್​ಗೂ ತಪ್ಪದ ಬೀದಿನಾಯಿಗಳ ಕಾಟ, ಮನೆಗಳಲ್ಲಿ ಬೆಚ್ಚಗೆ ಮಲಗಿರುವ ಬಿಬಿಎಂಪಿ ಅಧಿಕಾರಿಗಳು!

Updated on: Jul 30, 2025 | 10:30 AM

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿಷ್ಕ್ರಿಯತೆಗೆ ಬೀದಿನಾಯಿಗಳ ಕಾಟ ಒಂದು ನಿದರ್ಶನ ಅಷ್ಟೇ. ಜನಪ್ರತಿನಿಧಿಗಳಿಲ್ಲದ ಪಾಲಿಕೆಯಲ್ಲಿ ಅಧಿಕಾರಿಗಳು ರಾಜ-ಮಹಾರಾಜರು. ಬೀದಿನಾಯಿಗಳ ಕಾಟಕ್ಕೆ ಕಡಿವಾಣ ಹಾಕದಿದ್ದರೆ ಮತ್ತಷ್ಟು ಅನಾಹುತಗಳು ಸಂಭವಿಸೋದು ನಿಶ್ಚಿತ. ಜನ ರೊಚ್ಚಿಗೆದ್ದು ಪಾಲಿಕೆ ಕಚೇರಿಗಳನ್ನು ಮುತ್ತಿಗೆ ಹಾಕುವ ಮೊದಲು ಅಧಿಕಾರಿಗಳು ಫೀಲ್ಡಿಗಿಳಿದು ನಾಯಿಕಾಟ ನಿಯಂತ್ರಿಸುವುದೊಳಿತು.

ಬೆಂಗಳೂರು, ಜುಲೈ 30: ಒಂದು ಕಾಲದಲ್ಲಿ ನಿವೃತ್ತ ಜನರ ಸ್ವರ್ಗ ಎನಿಸಿಕೊಳ್ಳುತ್ತಿದ್ದ ಬೆಂಗಳೂರು ಇವತ್ತು ನಾಯಿಗಳ ಪ್ಯಾರಾಡೈಸ್ ಆಗಿರೋದು ಸುಳ್ಳಲ್ಲ. ನಗರದ ಪ್ರತಿ ಏರಿಯಾದಲ್ಲಿ ಬೀದಿನಾಯಿಗಳು (stray dog menace) ಗುಂಪಾಗಿ ಇಲ್ಲವೇ ಚದುರಿದಂತೆ ನಿಂತಿರುವುದನ್ನು ನೋಡಬಹುದು. ನಿನ್ನೆ ಕೊಡಿಗೇಹಳ್ಳಿಯಲ್ಲಿ ಹಿರಿಯ ವ್ಯಕ್ತಿಯೊಬ್ಬರು ನಾಯಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದನ್ನು ವರದಿ ಮಾಡಿದ್ದೇವೆ. ಜನ ಬೆಳಗ್ಗೆ ಹೊತ್ತು ವಾಕ್​ಗೆ, ಜಾಗಿಂಗ್​​ಗೆ ಬರುವ ಸಸ್ಯಕಾಶಿ ಲಾಲ್​ಬಾಗ್ ಮತ್ತು ಕಬ್ಬನ್ ಪಾರ್ಕ್​ಗಳನ್ನೂ ನಾಯಿಗಳು ಬಿಡುತ್ತಿಲ್ಲ. ನಮ್ಮ ವರದಿಗಾರ ಹೇಳುವಂತೆ ಪಾರ್ಕ್​ಗಳಿಗೆ ವೃದ್ಧರು ಮತ್ತು ಮಕ್ಕಳು ಕೂಡ ಬರುತ್ತಾರೆ. ನಾಯಿಗಳು ಅಂಥವರ ಮೇಲೆ ದಾಳಿ ನಡೆಸಿದರೆ ಏನು ಗತಿ?

ಇದನ್ನೂ ಓದಿ:  ಬೆಂಗಳೂರು: ಬಿಬಿಎಂಪಿ ಬಾಡೂಟ ಹಾಕುವುದಕ್ಕೂ ಮೊದಲೇ ಬೀದಿನಾಯಿಗಳ ಅಟ್ಟಹಾಸ; ಡೆಡ್ಲಿ ದಾಳಿಗೆ ವ್ಯಕ್ತಿ ಬಲಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ