ಬಿಗ್ ಬಾಸ್ ಕನ್ನಡ ಮುಂದಿನ ಸೀಸನನ್ನು ಯಾರು ಬೇಕಾದರೂ ಹೋಸ್ಟ್ ಮಾಡಬಹುದು: ಕಿಚ್ಚ ಸುದೀಪ್

|

Updated on: Dec 16, 2024 | 7:29 PM

ಕೌನ್ ಬನೇಗಾ ಕರೋಡ್ಪತಿಗೆ ಅಮಿತಾಬ್ ಬಚ್ಚನ್, ಹಿಂದಿ ಬಿಗ್ ಬಾಸ್​ಗೆ ಸಲ್ಮಾನ್ ಖಾನ್ ಮತ್ತು ಕನ್ನಡ ಬಿಗ್ ಬಾಸ್​ಗೆ ಸುದೀಪ್-ಇನ್​ಸಪರೇಬಲ್ ಕಂಪ್ಯಾನಿಯನ್ಸ್ ಇದ್ದಂತೆ. ಸುದೀಪ್ ಅವರೇನೋ ಸುಲಭವಾಗಿ ಯಾರು ಬೇಕಾದರೂ ಆಗಬಹುದು ಅಂತ ಹೇಳಿದರು. ಕೆಬಿಸಿಯನ್ನು ಬೇರೆಯವರಿಂದ ಮಾಡಿಸಲು ಹೋಗಿ ಚ್ಯಾನಲ್ ನವರು ಕೈಬಾಯಿ ಸುಟ್ಟುಕೊಂಡರು. ಹಾಗೆಯೇ, ಬಿಬಿಕೆಗೆ ಸುದೀಪ್ ಸ್ಥಾನದಲ್ಲಿ ಬೇರೆಯವರನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ.

ಬೆಂಗಳೂರು: ನಟ ಮತ್ತು ಕನ್ನಡ ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಟಿವಿ9ನೊಂದಿಗೆ ನಡೆಸಿರುವ ಎಕ್ಸ್​ಕ್ಲ್ಯೂಸಿವ್ ಮಾತುಕತೆಯಲ್ಲಿ ಬಿಗ್ ಬಾಸ್ ಬಗ್ಗೆಯೂ ಮಾತಾಡಿದ್ದಾರೆ. ಕನ್ನಡಿಗರಿಗೆಲ್ಲ ಗೊತ್ತಿರುವ ಹಾಗೆ ಸುದೀಪ್ ನಡೆಸಿಕೊಡುತ್ತಿರುವ ಕೊನೆಯ ಬಿಗ್ ಬಾಸ್ ಸೀಸನ್ ಇದು. ಹಾಗಾದರೆ, ಮುಂದಿನ ಹೋಸ್ಟ್ ಯಾರು? ಟಿವಿ9 ಅದೇ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಸುದೀಪ್ ಅವರನ್ನು ಕೇಳಿದಾಗ, ಯಾರು ಬೇಕಾದರೂ ಮುಂದಿನ ಹೋಸ್ಟ್ ಆಗಬಹುದು, ತನ್ನ ಹಾಗೆ ಅವರು ನಡೆಸಿಕೊಡುತ್ತಾರೋ ಇಲ್ಲವೋ ಅನ್ನೋದು ಅಭಿಪ್ರಾಯ ಅನಿಸಿಕೊಳ್ಳುತ್ತದೆ, ಹೋಲಿಕೆಗಳನ್ನು ಮಾಡೋದು ಬೇಡ, ಎಲ್ಲರಿಗೂ ತಮ್ಮದೇ ಅದ ವ್ಯಕ್ತಿತ್ವ ಮತ್ತು ಶೈಲಿ ಇರುತ್ತದೆ. ಅದರಂತೆ ನಡೆಸಿಕೊಂಡು ಹೋಗುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಂದುಕೊಂಡ ದಿನವೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಶಿಶಿರ್