‘ಇದರಿಂದ ಮಕ್ಕಳು ಎಷ್ಟು ನಲುಗಬಹುದು ಎಂಬುದನ್ನು ಯೋಚಿಸಿದಾಗ ಮನಸ್ಸು ವಿಚಲಿತವಾಗುತ್ತದೆ’: ಸುಚೇಂದ್ರ ಪ್ರಸಾದ್
ಸದ್ಯ ಬೆಳವಣಿಗೆ ಬಗ್ಗೆ ಸ್ಪಷ್ಟನೆ ನೀಡಿದ್ದ ಪವಿತ್ರಾ ಲೋಕೇಶ್, ‘ನಾವು ಮದುವೆ ಆಗಿಲ್ಲ 11 ವರ್ಷ ಒಟ್ಟಿಗೆ ಇದ್ದೆವು ಅಷ್ಟೇ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಘಟನೆ ಬೆನ್ನಲ್ಲೇ ಸುಚೇಂದ್ರ ಪ್ರಸಾದ್ ಅವರು ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅವರ ಹೆಸರು ಮುನ್ನೆಲೆಯಲ್ಲಿದೆ. ಇವರಿಬ್ಬರೂ ವಿಚ್ಛೇದನ ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಪವಿತ್ರಾ ಲೋಕೇಶ್, ‘ನಾವು ಮದುವೆ ಆಗಿಲ್ಲ 11 ವರ್ಷ ಒಟ್ಟಿಗೆ ಇದ್ದೆವು ಅಷ್ಟೇ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಘಟನೆ ಬೆನ್ನಲ್ಲೇ ಸುಚೇಂದ್ರ ಪ್ರಸಾದ್ (Suchendra Prasad) ಅವರು ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮೆರವಣಿಗೆಯನ್ನು ಬೆಳವಣಿಗೆ ಎಂದು ಹೇಳಬಾರದು. ಬಿರುಗಾಳಿ ಸುಂಟರಗಾಳಿ ಬರುತ್ತಿರುತ್ತದೆ. ಇದರಿಂದ ಮಕ್ಕಳು ಎಷ್ಟು ನಲುಗಬಹುದು ಎಂಬುದನ್ನು ಯೋಚನೆ ಮಾಡಿದಾಗ ನಿಜಕ್ಕೂ ಮನಸ್ಸು ವಿಚಲಿತವಾಗುತ್ತದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: Pavitra Lokesh: ‘ಸುಚೇಂದ್ರ ಪ್ರಸಾದ್ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್
ಪವಿತ್ರಾ ಲೋಕೇಶ್ ವಿಚಾರದಲ್ಲಿ ಸ್ವಚ್ಛ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ ಸುಚೇಂದ್ರ ಪ್ರಸಾದ್