ಪತ್ನಿ ಪ್ರಿಯಾ ಕೊಟ್ಟ ಉಡುಗೊರೆ ಬಗ್ಗೆ ಸುದೀಪ್ ಹೇಳಿದ್ದು ಹೀಗೆ
Sudeep-Priya: ನಟ ಸುದೀಪ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸುದೀಪ್ರ ಪತ್ನಿ ಪ್ರಿಯಾ, ಸುದೀಪ್ಗಾಗಿ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ಪತ್ನಿ ನೀಡಿದ ಉಡುಗೊರೆ ಬಗ್ಗೆ ಸುದೀಪ್ ಹೆಮ್ಮೆಯಿಂದ ಮಾತನಾಡಿದ್ದಾರೆ.
ನಟ ಕಿಚ್ಚ ಸುದೀಪ್ (Sudeep) ಅವರು ಇಂದು (ಸೆಪ್ಟೆಂಬರ್ 2) ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನಿಗೆ ಶುಭಾಶಯ ತಿಳಿಸಿದ್ದಾರೆ. ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸುದೀಪ್ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದರ ನಡುವೆ ಸುದೀಪ್ ಪತ್ನಿ ಪ್ರಿಯಾ, ಸುದೀಪ್ಗಾಗಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಡ್ರೋನ್ಗಳನ್ನು ಬಳಸಿ ಆಕಾಶದಲ್ಲಿ ಸುದೀಪ್ರ ಹಲವು ಚಿತ್ರಗಳು ಮೂಡುವಂತೆ ಮಾಡಿದ್ದಾರೆ. ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ ನೀಡಿದ ಉಡುಗೊರೆ ಬಗ್ಗೆ ಸುದೀಪ್ ಪ್ರೀತಿಯಿಂದ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ