ಸಿಸಿ ಕ್ಯಾಮರಾಗೇ ಬ್ಲ್ಯಾಕ್​ ಸ್ಪ್ರೇ ಮಾಡಿ ಎಟಿಎಂನಿಂದ 30 ಲಕ್ಷ ರೂ.ಕಳವು: ವಿಡಿಯೋ ನೋಡಿ ಬ್ಯಾಂಕ್ ಸಿಬ್ಬಂದಿಯೇ ಶಾಕ್

Edited By:

Updated on: Mar 01, 2025 | 12:00 PM

ಸಿಸಿ ಕ್ಯಾಮರಾಗಳಿಗೇ ಬ್ಲ್ಯಾಕ್ ಸ್ಪ್ರೇ ಮಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಕಳ್ಳರು 30 ಲಕ್ಷ ರೂ. ಎಗರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಘಟನೆಯ ವಿಡಿಯೋ ಸಿಸಿಟಿವಿ (ಬ್ಲ್ಯಾಕ್ ಸ್ಪ್ರೇ ಮಾಡುವ ವರೆಗಿನದ್ದು) ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.

ದೇವನಹಳ್ಳಿ, ಮಾರ್ಚ್ 1: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಎಟಿಎಂ ಕೊಠಡಿಗೆ ನುಗ್ಗಿದ ಖದೀಮರು, ಯಂತ್ರವನ್ನು ಕಟ್ ಮಾಡಿ 30 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಸೂಲಿಬೆಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ನುಗ್ಗಿದ ಕಳ್ಳರು, ಸಿಸಿ ಕ್ಯಾಮರಾಗಳಿಗೆ ಬ್ಲ್ಯಾಕ್​ ಸ್ಪ್ರೇ ಮಾಡಿದ್ದಾರೆ. ನಂತರ, ಗ್ಯಾಸ್​ ಕಟರ್​ ಬಳಸಿ ಎಟಿಎಂ ಮಷಿನ್ ಕಟ್​ ಮಾಡಿ ಹಣ ಕಳವು ಮಾಡಿದ್ದಾರೆ. ಮೈಗೆ, ಮುಖಕ್ಕೆ ಬೆಡ್​ಶೀಟ್​ ಮುಚ್ಚಿಕೊಂಡು ಬಂದಿದ್ದ ಕಳ್ಳರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ