‘100 ವರ್ಷ ಆದರೂ ಮರೆಯೋಕೆ ಸಾಧ್ಯವಿಲ್ಲ’: ಅಂಬರೀಷ್ ಬಗ್ಗೆ ಸುಮಲತಾ ಮಾತು

Updated on: Nov 24, 2026 | 4:52 PM

ನಟ ಅಂಬರೀಷ್ ಅವರ 8ನೇ ವರ್ಷದ ಪುಣ್ಯಸ್ಮರಣೆ ಸಲುವಾಗಿ ಇಂದು (ನವೆಂಬರ್ 24) ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ನಟಿ ಸುಮಲತಾ ಅಂಬರೀಷ್ ಅವರು ಮಾತನಾಡಿದರು. ‘ಅಂಬರೀಷ್ ಅವರ ವ್ಯಕ್ತಿತ್ವ ಹೇಗಿತ್ತು ಎಂದರೆ, ಅವರನ್ನು ಇನ್ನು 100 ವರ್ಷ ಆದರೂ ಯಾರೂ ಮರೆಯೋಕೆ ಸಾಧ್ಯವಿಲ್ಲ’ ಎಂದಿದ್ದಾರೆ.

ನಟ ಅಂಬರೀಷ್ ಅವರ 8ನೇ ವರ್ಷದ ಪುಣ್ಯಸ್ಮರಣೆ ಸಲುವಾಗಿ ಇಂದು (ನವೆಂಬರ್ 24) ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ನಟಿ ಸುಮಲತಾ ಅಂಬರೀಷ್ ಅವರು ಮಾತನಾಡಿದರು. ‘ಅಂಬರೀಷ್ ಅವರ ವ್ಯಕ್ತಿತ್ವ ಹೇಗಿತ್ತು ಎಂದರೆ, ಅವರನ್ನು ಇನ್ನು 100 ವರ್ಷ ಆದರೂ ಯಾರೂ ಮರೆಯೋಕೆ ಸಾಧ್ಯವಿಲ್ಲ. ಎಲ್ಲಿಯೇ ಹೋದರೂ ಅವರ ಸ್ನೇಹಿತರು, ಪರಿಚಯದವರು ಪ್ರತಿ ದಿನ ಅವರ ಬಗ್ಗೆ ಹೊಸ ಹೊಸ ವಿಷಯ ಹೇಳುತ್ತಾರೆ. ಹಾಗಾಗಿ ನಮಗೆ ಕೂಡ ಆ ನೆನಪುಗಳು ಯಾವಾಗಲೂ ಹೊಸದಾಗಿಯೇ ಇರುತ್ತವೆ. ಅವರು ಬಿಟ್ಟು ಹೋಗಿರುವ ಸುಂದರವಾದ ನೆನಪುಗಳಲ್ಲೇ ನಾವು ಪ್ರತಿ ದಿನವನ್ನು ಕಳೆಯುತ್ತಿದ್ದೇವೆ. ಅಂಬರೀಷ್ ಅವರ ಸ್ಮಾರಕಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದರು. ಮಧ್ಯದಲ್ಲಿ ಕೆಲವು ಅಡೆತಡೆಗಳು ಎದುರಾಗಿದ್ದವು. ಕೊವಿಡ್ ಸಂದರ್ಭದಲ್ಲಿ ಕೆಲಸಗಳು ನಿಂತು ಹೋಗಿದ್ದವು. ನಾವು ತುಂಬ ಒತ್ತಡ ಹಾಕಿದ್ದಕ್ಕಾಗಿ ಈಗ ಕೆಲಸ ನಡೆಯುತ್ತಿದೆ. ಖಂಡಿತಾ ಇದು ಒಂದು ಸುಂದರವಾದ ಜಾಗ ಆಗಿರುತ್ತದೆ. ಅಭಿಮಾನಿಗಳು ಇಲ್ಲಿಗೆ ಬಂದಾಗ ತುಂಬಾ ಖುಷಿಪಡುತ್ತಾರೆ. ಮ್ಯೂಸಿಯಂ ಸಲುವಾಗಿ ನಾವು ತುಂಬಾ ಪ್ಲ್ಯಾನ್ ಹಾಕಿಕೊಂಡಿದ್ದೇವೆ’ ಎಂದು ಸುಮಲತಾ ಅಂಬರೀಷ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More