ಮಗ-ಸೊಸೆ ಜೊತೆ ಅಂಬಿ ಸ್ಮಾರಕಕ್ಕೆ ಸುಮಲತಾ ಪೂಜೆ
ಅಂಬರೀಷ್ ನಮ್ಮ ಜೊತೆ ಇದ್ದಿದ್ದರೆ 72ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಅಭಿಮಾನಿಗಳು ಸಾಮಾಜಿಕ ಕೆಲಸಗಳನ್ನು ಮಾಡಿ ಅಂಬರೀಷ್ ಅವರನ್ನು ನೆನಪಿಸಿಕೊಂಡಿದ್ದಾರೆ. ಸುಮಲತಾ ಅಂಬರೀಷ್ ಅವರು ಬೆಳಿಗ್ಗೆಯೇ ಮಗ ಅಭಿಷೇಕ್ ಹಾಗೂ ಸೊಸೆ ಅವಿವಾ ಅಂಬಿ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ.
ಅಂಬರೀಷ್ (Ambareesh) ಅವರು ನಮ್ಮನ್ನು ಬಿಟ್ಟು ಹೋಗಿ ಆರು ವರ್ಷಗಳು ಕಳೆಯುತ್ತಾ ಬಂದಿವೆ. ಇಂದು (ಮೇ 29) ಅವರು ನಮ್ಮ ಜೊತೆ ಇದ್ದಿದ್ದರೆ 72ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಅಭಿಮಾನಿಗಳು ಸಾಮಾಜಿಕ ಕೆಲಸಗಳನ್ನು ಮಾಡಿ ಅಂಬರೀಷ್ ಅವರನ್ನು ನೆನಪಿಸಿಕೊಂಡಿದ್ದಾರೆ. ಸುಮಲತಾ ಅಂಬರೀಷ್ ಅವರು ಬೆಳಿಗ್ಗೆಯೇ ಮಗ ಅಭಿಷೇಕ್ ಹಾಗೂ ಸೊಸೆ ಅವಿವಾ ಜೊತೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಅಂಬಿಯ ಇಷ್ಟದ ತಿನಿಸುಗಳನ್ನು ಎಡೆ ಇಡಲಾಗಿದೆ. ಅಂಬರೀಷ್ ಸ್ಮಾರಕದ ದರ್ಶನ ಪಡೆಯಲು ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಇಲ್ಲಿಗೆ ಆಗಮಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.