ಹತ್ತಿಪ್ಪತ್ತು ಶಾಸಕರನ್ನು ಕಟ್ಟಿಕೊಂಡು ಮುಖ್ಯಮಂತ್ರಿಯಾಗುವ ಕನಸು ಕಾಣೋದು ಸರಿಯಲ್ಲ: ಜಿಟಿ ದೇವೇಗೌಡ, ಶಾಸಕ
ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು 138 ಶಾಸಕರನ್ನು ಹೊದಿರುವುದರಿಂದ ಅದರ ತಳಪಾಯ ಭದ್ರವಾಗಿದೆ, ಸರ್ಕಾರ ಬಿದ್ಹೋಗುತ್ತದೆ ಅಂತ ವಿರೋಧ ಪಕ್ಷದವರು ಪದೇಪದೆ ಹೇಳಿದ್ದನ್ನು ಕೇಳಿಸಿಕೊಂಡು ಕಾಂಗ್ರೆಸ್ ನಾಯಕರಿಗೆ ಸಾಕಾಗಿರಬೇಕು, ಹಾಗೆ ಹೇಳುತ್ತಿದ್ದವರೂ ಹೇಳಿ ಹೇಳಿ ಸುಸ್ತಾಗಿರಬಹುದು ಎಂದು ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರೂ ಆಗಿರುವ ದೇವೇಗೌಡ ಹೇಳಿದರು.
ಮೈಸೂರು: ಜೆಡಿಎಸ್ ಪಕ್ಷದ ಶಾಸಕ ಮತ್ತು ಹಿರಿಯ ರಾಜಕಾರಣಿ ಜಿಟಿ ದೇವೇಗೌಡ ಈಗ ಕಾಂಗ್ರೆಸ್ ಮುಖಂಡನಂತೆ ಮಾತಾಡುತ್ತಿದ್ದಾರೆ. ಮುಂದೊಂದು ದಿನ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗೋದು ನಿಶ್ಚಿತ, ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ಅವರು ಕೆಲಸ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಹೇಗೆ ಶಿವಕುಮಾರ್ ಬೆಂಬಲ ನೀಡಿದ್ದರೋ ಸಿದ್ದರಾಮಯ್ಯ ಸಹ ಆ ಋಣವನ್ನು ತೀರಿಸಲಿದ್ದಾರೆ ಎಂದು ದೇವೇಗೌಡ ಹೇಳಿದರು. ಮುಖ್ಯಮಂತ್ರಿಯಾಗಲು ಎಲ್ಲ 138 ಕಾಂಗ್ರೆಸ್ ಶಾಸಕರ ಬೆಂಬಲ ಬೇಕು, ಹತ್ತಿಪ್ಪತ್ತು ಶಾಸಕರನ್ನು ಕಟ್ಟಿಕೊಂಡು ಸಿಎಂ ಅಗೋದು ಸಾಧ್ಯವಿಲ್ಲ ಅಂತ ಅವರು ಶಿವಕುಮಾರ್ ಕುರಿತು ಹೇಳಿದಂತಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
Latest Videos