ಯಾವುದೇ ತಪ್ಪು ಮಾಡದಿರುವ ಕಾರಣಕ್ಕೆ ಇಷ್ಟು ಧೈರ್ಯವಾಗಿದ್ದೇನೆ: ಸೂರಜ್ ರೇವಣ್ಣ, ಪರಿಷತ್ ಸದಸ್ಯ
ಜೆಡಿಎಸ್ ಕಾರ್ಯಕರ್ತನೊಬ್ಬನನ್ನು ತನ್ನ ತೋಟದ ಮನೆಗೆ ಕರೆದು ಅವನ ಮೇಲೆ ಅಸಹಜ ಲೈಂಗಿಕ ಅತ್ಯಾಚಾರ ನಡೆಸಿದ ಅರೋಪದಲ್ಲಿ ಸೂರಜ್ ರೇವಣ್ಣರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಅವರ ಸಹೋದರ ಪ್ರಜ್ವಲ್ ರೇವಣ್ಣ ವಿರುದ್ಧ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆರಸಿರುವ ಅರೋಪಗಳಿದ್ದು ಅವರಿನ್ನೂ ಜೈಲಲ್ಲಿದ್ದಾರೆ.
ಮೈಸೂರು: ಜಾಮೀನು ಪಡೆದು ಜೈಲಿಂದ ಹೊರಬಂದಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ ನಿರಾಳರಾಗಿದ್ದಾರೆ ಗೆಲುವಾಗಿದ್ದಾರೆ. ಇವತ್ತು ಅವರು ತಮ್ಮ ಕೆಲ ಬೆಂಬಲಿಗರೊಂದಿಗೆ ಬಂದು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಆಷಾಢ ಮಾಸದ ಮೂರನೇ ಶುಕ್ರವಾರವಾಗಿರುವ ಇಂದು ಚಾಮುಂಡಿಗೆ ವಿಶೇಷ ಪೂಜೆಗಳು ಬೆಳಗಿನ ಜಾವದಿಂದ ನಡೆಯುತ್ತಿವೆ ಮತ್ತು ಸಹಸ್ರಾರು ಜನ ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೂರಜ್, ಪ್ರತಿವರ್ಷ ಆಷಾಢ ಮಾಸದಲ್ಲಿ ತಂದೆ ತಾಯಿಗಳೊಂದಿಗೆ ಮೈಸೂರಿಗೆ ಬಂದು ಚಾಮುಂಡೇಶ್ವರಿ ಪೂಜೆ ಸಲ್ಲಿಸುವ ಪರಿಪಾಠ ಇಟ್ಟುಕಕೊಂಡಿದ್ದು ಈ ವರ್ಷವೂ ಬಂದಿದ್ದೇನೆ ಮತ್ತು ನಾಡಿನ ಎಲ್ಲ ಜನರಿಎಗ ಒಳ್ಳೆಯದಾಗಲಿ ಅಂತ ಪ್ರಾರ್ಥಿಸಿಕೊಂಡಿದ್ದೇನೆ ಎಂದರು. ತಮ್ಮ ಕುಟುಂಬದ ಮೇಲಿನ ಅರೋಪಗಳ ಬಗ್ಗೆ ಕೇಳಿದಾಗ, ತಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ, ಆದರೆ ಯಾವತ್ತೂ ಸತ್ಯವನ್ನು ಮುಚ್ಚಿಡಲಾಗಲ್ಲ, ಮುಂದಿನ 15-20 ದಿನಗಳಲ್ಲಿ ಎಲ್ಲವೂ ಬಯಲಾಗುತ್ತೆ ನೋಡ್ತಾ ಇರಿ ಎಂದು ಸೂರಜ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:ನಮ್ಮ ಕುಟುಂಬದ ತೇಜೋವಧೆ ಮಾಡಲು ಷಡ್ಯಂತ್ರ ರಚಿಸಲಾಗಿದೆ: ಡಾ ಸೂರಜ್ ರೇವಣ್ಣ, ಪರಿಷತ್ ಸದಸ್ಯ