ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು, 13 ಜನರಿಗೆ ಗಾಯ

Updated on: Feb 07, 2026 | 9:50 PM

ಸೂರಜ್‌ಕುಂಡ್ ಜಾತ್ರೆಯ ವೇಳೆ ಜನದಟ್ಟಣೆಯ ಪ್ರದೇಶದಲ್ಲಿ ಉಯ್ಯಾಲೆ ಕುಸಿದು ಓರ್ವ ಸಾವನ್ನಪ್ಪಿದ್ದು, 13 ಜನರಿಗೆ ಗಾಯಗಳಾಗಿವೆ. ಇಂದು ಸಂಜೆ ಫರಿದಾಬಾದ್‌ನ ಜನದಟ್ಟಣೆಯ ಸೂರಜ್‌ಕುಂಡ್ ಜಾತ್ರೆಯಲ್ಲಿ ಸುನಾಮಿ ಉಯ್ಯಾಲೆ ಬಿದ್ದ ದುರಂತ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಪೊಲೀಸ್ ಸಾವನ್ನಪ್ಪಿದ್ದರೆ, ಕನಿಷ್ಠ 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಫರಿದಾಬಾದ್, ಫೆಬ್ರವರಿ 7: ಹರಿಯಾಣದ ಫರೀದಾಬಾದ್​ನಲ್ಲಿ ನಡೆಯುತ್ತಿದ್ದ ಸೂರಜ್‌ಕುಂಡ್ ಜಾತ್ರೆಯಲ್ಲಿ ದುರಂತ ಸಂಭವಿಸಿದೆ. ಎಲ್ಲ ಜಾತ್ರೆಗಳಲ್ಲೂ ಇರುವಂತೆ ಆ ಜಾತ್ರೆಯಲ್ಲೂ ಜಾಯಿಂಟ್ ವೀಲ್, ಜೋಕಾಲಿ ಮತ್ತಿತರ ಸ್ವಿಂಗ್​ಗಳನ್ನು ಹಾಕಲಾಗಿತ್ತು. ಈ ವೇಳೆ ಸುನಾಮಿ ಸ್ವಿಂಗ್ ತುಂಡಾಗಿ ಬಿದ್ದಿದೆ. ಅದರಲ್ಲಿ ಕುಳಿತಿದ್ದವರು ಕೆಳಗೆ ಬೀಳಲಾರಂಭಿಸಿದರು. ಜಾತ್ರೆಯಲ್ಲಿ ವಿಪರೀತ ಜನ ಸೇರಿದ್ದರಿಂದ ಏನಾಯಿತು ಎಂದು ಅಲ್ಲಿದ್ದವರಿಗೆ ಗೊತ್ತಾಗುವಷ್ಟರಲ್ಲಿ ಮೇಲಿನಿಂದ ಬಿದ್ದು ಪೊಲೀಸ್ ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ಸಮಯದಲ್ಲಿ ಉಯ್ಯಾಲೆಯಲ್ಲಿ 18 ಜನರಿದ್ದರು. ಈ ದುರಂತಕ್ಕೆ ಹರಿಯಾಣ ಸಿಎಂ ದುಃಖ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More