ಹೃದ್ರೋಗ ತಜ್ಞರ ಸಮ್ಮುಖದಲ್ಲಿ ಸೈಫ್ ಅಲಿ ಖಾನ್​ಗೆ ಸರ್ಜರಿ; ಆರೋಗ್ಯ ಸ್ಥಿರ, ಅಪಾಯದಿಂದ ಪಾರು: ಲೀಲಾವತಿ ಆಸ್ಪತ್ರೆ ವೈದ್ಯರು

|

Updated on: Jan 16, 2025 | 3:48 PM

ಮಾಧ್ಯಮಗಳೊಂದಿಗೆ ಮಾತಾಡಿದ ಸರ್ಜನ್ ಡಾ ನಿತಿನ್ ಡಾಂಗೆ, ನಟ ಸೈಫ್ ಅವರಿಗೆ ಥೊರ‍್ಯಾಸಿಕ್ ಸ್ಪೈನಲ್ ಕಾರ್ಡ್ ಬಳಿ ಗಂಭೀರಸ್ವರೂಪದ ಇರಿತದ ಗಾಯವಾಗಿತ್ತು, ಆ ಭಾಗದಲ್ಲಿ ಸಿಕ್ಕಿಕೊಂಡಿದ್ದ ಚಾಕುವಿನ ತುಣುಕನ್ನು ಸರ್ಜರಿ ಮೂಲಕ ತೆಗೆಯಲಾಗಿದೆ ಮತ್ತು ಸ್ಪೈನಲ್ ಫ್ಲೂಯಿಡ್ ಸೋರುವಿಕೆಯನ್ನು ನಿಲ್ಲಿಸಲಾಗಿದೆ, ಕುತ್ತಿಗೆ ಮೇಲಿದ್ದ ಮತ್ತೆರಡು ಆಳದ ಗಾಯಗಳನ್ನು ಪ್ಲಾಸ್ಟಿಕ್ ಸರ್ಜನ್​ಗಳು ದುರಸ್ತಿ ಮಾಡಿದ್ದಾರೆ, ಅವರ ಅರೋಗ್ಯವೀಗ ಸ್ಥಿರವಾಗಿದೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.

ಮುಂಬೈ: ಇಂದು ಬೆಳಗಿನ ಜಾವ ಸುಮಾರು 2.30 ಕ್ಕೆ ಮನೆಗೆ ಕಳ್ಳತನದ ಉದ್ದೇಶದಿಂದ ನುಗ್ಗಿದ ಎಂದು ಆರೋಪಿಸಲಾಗುತ್ತಿರುವ ವ್ಯಕ್ತಿಯಿಂದ ಹಲ್ಲೆಗೊಳಗಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್​ ನಟ ಸೈಫ್ ಅಲಿ ಖಾನ್ ಅವರ ಆಪರೇಷನ್ ಗಳು ನಡೆದಿದ್ದು ಆರೋಗ್ಯ ಸ್ಥಿರವಾಗಿದೆ ಮತ್ತು ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಸಿಓಓ ಡಾ ಉತ್ತಮಣಿ ಹೇಳಿದ್ದಾರೆ. ಸೈಫ್ ಅವರಿಗೆ ಚಾಕು ಇರಿತದ ಒಟ್ಟು 6 ಗಾಯಗಳಾಗಿದ್ದು ಅದರಲ್ಲಿ ಎರಡು ಚಿಕ್ಕ ಪ್ರಮಾಣದವು, ಎರಡು ಮಧ್ಯಂತರ ಮತ್ತು ಉಳಿದೆರಡು ಆಳವಾದ ಗಾಯಗಳು, ಅವರ ಬೆನ್ನಿಂದ ಸುಮಾರು ಎರಡೂವರೆ ಇಂಚು ಉದ್ದವಿರುವ ಚಾಕುವಿನ ತುಂಡನ್ನು ಸರ್ಜರಿ ಮೂಲಕ ತೆಗೆಯಲಾಗಿದೆ ಎಂದು ವೈದ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸೈಫ್ ಅಲಿ ಖಾನ್ ಆಸ್ಪತ್ರೆ ಸೇರಿದ್ದು ಆಟೋದಲ್ಲಿ; ಸಹಾಯಕ್ಕೆ ಬಂದಿದ್ದು ಈ ವ್ಯಕ್ತಿ