ಸುಜುಕಿ ಅಲ್ಟೋ ಹೊಸ ವಿನ್ಯಾಸ ಮತ್ತು ಸಾಕಷ್ಟು ಬದಲಾವಣೆಗಳೊಂದಿಗೆ ಭಾರತದಲ್ಲಿ ಲಾಂಚ್ ಆಗಲಿದೆ
ಮಾರುತಿ ಕಾರು ಉತ್ಪಾದನಾ ಘಟಕಗಳಲ್ಲಿ ಹೊಸ ಕಾರಿನ ಮಾಡೆಲ್ ಒಂದು ಕಣ್ಣಿಗೆ ಬಿದ್ದಿದ್ದು ಅದು ಹೊಸ ತಲೆಮಾರು-ಅಲ್ಟೋ ಇರಬಹುದೆಂದು ಹೇಳಲಾಗುತ್ತ್ತಿದೆ. ಸುಮಾರು ಒಂದು ದಶಕದ ಹಿಂದೆ ಲಾಂಚ್ ಆಗಿರುವ ಅಲ್ಟೋ ಕಾರನ್ನು ನವೀಕರಿಸುವುದು ಅತ್ಯಂತ ಅವಶ್ಯಕವಾಗಿತ್ತು.
ಒಂದು ಚಿಕ್ಕ ಕುಟುಂಬಕ್ಕೆ ಹೇಳಿ ಮಾಡಿಸಿದಂತಿರುವ ಸುಜುಕಿ ಅಲ್ಟೋ ಹೊಸ ವಿನ್ಯಾಸ ಮತ್ತು ನವೀಕೃತ ಒಳಾಂಗಣ ಮತ್ತು ಹೊರಾಂಗಣದೊಂದಿಗೆ ಜಪಾನ್ ನಲ್ಲಿ ಲಾಂಚ್ ಅಗಿದ್ದು ಮುಂದಿನ ವರ್ಷದ ಆರಂಭಿಕ ಹಂತದಲ್ಲಿ ಭಾರತದಲ್ಲೂ ರಸ್ತೆಗಿಳಿಯಲಿದೆ. ಆದರೆ ತಜ್ಞರ ಪ್ರಕಾರ ಅಲ್ಲಿ ಜಪಾನ್-ಸ್ಪೆಕ್ ಅಲ್ಟೋ ಮತ್ತು ಇಂಡಿಯ-ಸ್ಪೆಕ್ ಅಲ್ಟೋ ಕಾರುಗಳ ನಡುವೆ ವ್ಯತ್ಯಾಸವಿರಲಿದೆ. ಓಕೆ, ಜಪಾನಲ್ಲಿ ಲಾಂಚ್ ಅಗಿರುವ 2022 ಅಲ್ಟೋ ಹಳೆಯ ಅಲ್ಟೋ ಮಾಡೆಲ್ ಗಿಂತ ದೊಡ್ಡದೆನಿಸುತ್ತಿದೆ. ಬಾರತೀಯ ಮಾಡೆಲ್ ಗೆ ಮತ್ತಷ್ಟು ಹೊಸ ಫೀಚರ್ಗಳನ್ನು ಸೇರಿಸಬಹುದು ಎಂದು ಹೇಳಲಾಗುತ್ತಿದೆ ಮತ್ತು ಈ ಕಾರು ನೋಡಲು ವ್ಯಾಗನ್ ಆರ್ ಥರ ಕಾಣಿಸುತ್ತಿದೆ.
ಹೊಸ ಅಲ್ಟೋನಲ್ಲಿ ಟಚ್ ಸ್ಕ್ರೀನ್ ಇನ್ಪೋಟೇನ್ಮೆಂಟ್ ಮತ್ತು ಕೀ-ರಹಿತ ಪ್ರವೇಶದಂಥ ಫೀಚರ್ಗಳು ಮುಂದುವರಿಯಲಿವೆ ಮತ್ತು 0.8-ಲೀಟರ್ ಮತ್ತು 1-ಲೀಟರ್ ಎಂಜಿನ್ ಗಳನ್ನು ನಿರೀಕ್ಷಿಸಲಾಗಿದೆ. ಹೊಸ ಕಾರಿನ ಬೆಲೆ ಎಷ್ಟಾಗಬಹುದು ಅಂತ ಕಂಪನಿ ಮೂಲಗಳು ಬಹಿರಂಗಪಡಿಸಿಲ್ಲವಾದರೂ ಸುಮಾರು ರೂ. 3.5 ಲಕ್ಷ ನಿಗದಿಯಾಗಬಹುದೆಂದು ಹೇಳಲಾಗುತ್ತಿದೆ.
ಮಾರುತಿ ಕಾರು ಉತ್ಪಾದನಾ ಘಟಕಗಳಲ್ಲಿ ಹೊಸ ಕಾರಿನ ಮಾಡೆಲ್ ಒಂದು ಕಣ್ಣಿಗೆ ಬಿದ್ದಿದ್ದು ಅದು ಹೊಸ ತಲೆಮಾರು-ಅಲ್ಟೋ ಇರಬಹುದೆಂದು ಹೇಳಲಾಗುತ್ತ್ತಿದೆ. ಸುಮಾರು ಒಂದು ದಶಕದ ಹಿಂದೆ ಲಾಂಚ್ ಆಗಿರುವ ಅಲ್ಟೋ ಕಾರನ್ನು ನವೀಕರಿಸುವುದು ಅತ್ಯಂತ ಅವಶ್ಯಕವಾಗಿತ್ತು.
ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಮುಂದಿನ ಎರಡನೇ ತ್ರೈಮಾಸಿಕನಲ್ಲಿ ಮಾರುತಿ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲಿದೆ. ನಿಮಗೆ ಗೊತ್ತಿರುವ ಹಾಗೆ ಅದು 14 ಬಗೆಯ ಕಾರುಗಳನ್ನು ತಯಾರು ಮಾಡುತ್ತದೆ-ಇಕ್ಕೊ, ಅಲ್ಟೋ-800, ಎಸ್-ಪ್ರೆಸ್ಸೋ, ವ್ಯಾಗನ್ ಆರ್, ಸೆಲಿರಿಯೋ, ಸ್ವಿಫ್ಟ್, ಡಿಜೈರ್, ಇಗ್ನಿಸ್, ಬೆಲೆನೊ, ಸಿಯಾಝ್, ಅರ್ಟಿಗಾ, ಎಕ್ಸ್ಎಲ್6, ವಿಟಾರಾ ಬ್ರೆಜ್ಜಾ, ಮತ್ತು ಎಸ್-ಕ್ರಾಸ್. ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಾಡೆಲ್ಗಳ ಬೆಲೆ ಹೆಚ್ಚಾಗಲಿದೆ.
ಇದನ್ನೂ ಓದಿ: MS Dhoni: ಧೋನಿ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ಯಾಂಡಲ್ವುಡ್ ನಟಿಯ ವಿಡಿಯೋ ವೈರಲ್