56 ರನ್ಗೆ 7 ವಿಕೆಟ್… ಆದರೂ ಪಂದ್ಯ ಗೆದ್ದ ಸಿಡ್ನಿ ಸಿಕ್ಸರ್ಸ್
Sydney Sixers vs Brisbane Heat: 8ನೇ ವಿಕೆಟ್ಗೆ ಜೊತೆಗೂಡಿದ ಜೋಯೆಲ್ ಡೇವಿಸ್ ಹಾಗೂ ಹೇಡನ್ ಕೇರ್ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. ಅತ್ಯತ್ತಮವಾಗಿ ಬ್ಯಾಟ್ ಬೀಸಿದ ಡೇವಿಸ್ 26 ಎಸೆತಗಳಲ್ಲಿ 35 ರನ್ ಬಾರಿಸಿದರೆ, ಹೇಡನ್ ಕೇರ್ 27 ರನ್ಗಳಿಸಿದರು. ಅಲ್ಲದೆ 8ನೇ ವಿಕೆಟ್ಗೆ 62 ರನ್ಗಳ ಜೊತೆಯಾಟವಾಡುವ ಮೂಲಕ ಸಿಡ್ನಿ ಸಿಕ್ಸರ್ಸ್ ತಂಡವನ್ನು 18.4 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಸಿಡ್ನಿ ಸಿಕ್ಸರ್ಸ್ ತಂಡವು 3 ವಿಕೆಟ್ಗಳ ರೋಚಕ ಜಯ ತಂದು ಕೊಡುವಲ್ಲಿ ಯಶಸ್ವಿಯಾದರು.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ 24ನೇ ಪಂದ್ಯದಲ್ಲಿ ರಣರೋಚಕ ಹೋರಾಟ ಕಂಡು ಬಂದಿದೆ. ಅದು ಕೂಡ ಲೋ ಸ್ಕೋರಿಂಗ್ ಆಟದೊಂದಿಗೆ. ಅಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ಹೀಟ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 114 ರನ್ಗಳು ಮಾತ್ರ.
115 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ತಂಡವು 56 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಗೆಲುವನ್ನು ಎಲ್ಲರೂ ನಿರೀಕ್ಷಿಸಿದ್ದರು.
ಆದರೆ 8ನೇ ವಿಕೆಟ್ಗೆ ಜೊತೆಗೂಡಿದ ಜೋಯೆಲ್ ಡೇವಿಸ್ ಹಾಗೂ ಹೇಡನ್ ಕೇರ್ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. ಅತ್ಯತ್ತಮವಾಗಿ ಬ್ಯಾಟ್ ಬೀಸಿದ ಡೇವಿಸ್ 26 ಎಸೆತಗಳಲ್ಲಿ 35 ರನ್ ಬಾರಿಸಿದರೆ, ಹೇಡನ್ ಕೇರ್ 27 ರನ್ಗಳಿಸಿದರು.
ಅಲ್ಲದೆ 8ನೇ ವಿಕೆಟ್ಗೆ 62 ರನ್ಗಳ ಜೊತೆಯಾಟವಾಡುವ ಮೂಲಕ ಸಿಡ್ನಿ ಸಿಕ್ಸರ್ಸ್ ತಂಡವನ್ನು 18.4 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಸಿಡ್ನಿ ಸಿಕ್ಸರ್ಸ್ ತಂಡವು 3 ವಿಕೆಟ್ಗಳ ರೋಚಕ ಜಯ ತಂದು ಕೊಡುವಲ್ಲಿ ಯಶಸ್ವಿಯಾದರು.

