ಜವಾಬ್ದಾರಿಯುತ ಸ್ಥಾನದಲ್ಲಿರುವ ಜನ ಆಡುವ ಮಾತಿನಲ್ಲಿ ತೂಕವಿರಬೇಕು: ಡಿವಿ ಸದಾನಂದಗೌಡ
ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ವಿರುದ್ಧ ಎಫ್ಐಅರ್ ಆಗಿರುವುದರ ಬಗ್ಗೆ ಕೇಳಿದಾಗ ಸದಾನಂದಗೌಡರು, ರವಿಕುಮಾರ್ ಮಾತ್ರ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮತ್ತು ಪಕ್ಷದ ಪ್ರಮುಖ ಹುದ್ದೆಗಳಲ್ಲಿರುವವರು ಯೋಚಿಸಿ ಮಾತಾಡಬೇಕು, ಅವರಾಡುವ ಮಾತಲ್ಲಿ ತೂಕವಿದ್ದರೆ ಮಾತ್ರ ಗೌರವ ಹುಟ್ಟುತ್ತದೆ, ಇತ್ತೀಚಿಗೆ ಕೆಲ ಬಿಜೆಪಿ ನೇತಾರರು ಬಾಯಿ ಸಡಿಲ ಬಿಟ್ಟು ಮಾತಾಡಿ ಗೊಂದಲ ಸೃಷ್ಟಿಸಿದ್ದನ್ನು ನೋಡಿದ್ದೇವೆ ಎಂದು ಹೇಳಿದರು.
ಬೆಂಗಳೂರು, ಜುಲೈ 4: ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ (purification) ಕಾರ್ಯ ಮುಗಿದಿದೆ, ಅಶಿಸ್ತು ಮೈಗೂಡಿಸಿಕೊಂಡವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಪಕ್ಷದ ಹಿರಿಯ ನಾಯಕ ಡಿವಿ ಸದಾನಂದಗೌಡ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರರು ಎರಡನೇ ಹಂತದ ಶುದ್ಧೀಕರಣ ಕಾರ್ಯ ಜಾರಿಯಲ್ಲಿದೆ, ಎಲ್ಲರನ್ನೂ ಪಕ್ಷದಿಂದ ಹೊರಹಾಕಲಾಗಲ್ಲ, ಹಾಗೆ ಮಾಡಿದರೆ ಪಕ್ಷ ಉಳಿಯಬೇಕಲ್ಲ ಎಂದು ಹೇಳಿದ ಸದಾನಂದಗೌಡರು, ಶುದ್ಧೀಕರಣ ಮಾಡುವ ಕೆಲಸದಲ್ಲಿ ತೊಡಗುವವರು ಶುದ್ಧರಾಗಿರುವ ಅವಶ್ಯಕತೆಯಿದೆ ಎಂದು ನಗುತ್ತಾ ಹೇಳಿದರು.
ಇದನ್ನೂ ಓದಿ: ಸದಾನಂದಗೌಡರ ಮನೆಯಲ್ಲಿ ಅಶೋಕ, ಬೊಮ್ಮಾಯಿ, ಅಶ್ವಥ್ ಮತ್ತು ಸಿಟಿ ರವಿ ಮೀಟಿಂಗ್!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ