ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ಭಕ್ತರು!

ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ಭಕ್ತರು!

Updated on: Nov 28, 2026 | 7:31 PM

ಬೆಟ್ಟದ ತುದಿಯಲ್ಲಿ ದೀಪ ಬೆಳಗುತ್ತಿದ್ದಂತೆಯೇ ಕೆಳಭಾಗದಲ್ಲಿ ಭಕ್ತರು ಕೈಮುಗಿದು ಭಾವುಕರಾಗಿ ಕಣ್ಣೀರಿಡುತ್ತಿರುವ ಮತ್ತು ಮುರುಗನ ನಾಮಸ್ಮರಣೆ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಸುಪ್ರೀಂ ಕೋರ್ಟ್ ನೇಮಿಸಿದ್ದ ದೇವಸ್ಥಾನದ ರಿಸೀವರ್‌ಗಳಾದ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರ ನೇರ ಮೇಲ್ವಿಚಾರಣೆಯಲ್ಲಿ ಈ ಪೂಜಾ ಕಾರ್ಯ ನೆರವೇರಿತು. ಉಚ್ಚಿ ಪಿಳ್ಳೈಯಾರ್ ಮಂಟಪದಿಂದ ತರಲಾದ ಪವಿತ್ರ ಜ್ಯೋತಿಯನ್ನು ಬಳಸಿ ದೇವಸ್ಥಾನದ ವಂಶಪಾರಂಪರ್ಯ ಅರ್ಚಕರು (ಸ್ಥಾನಿಕ ಭಟ್ಟರು) ದೀಪತೂಣ್‌ನಲ್ಲಿ ದೀಪ ಬೆಳಗಿದರು.

ಮಧುರೈ, ನವೆಂಬರ್ 28: ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಮಧುರೈನ ತಿರುಪ್ಪರಣಕುಂದ್ರಮ್ ಬೆಟ್ಟದ ಮೇಲಿರುವ ಪ್ರಾಚೀನ ‘ದೀಪತೂನ್’ ಕಲ್ಲಿನ ಸ್ತಂಭದಲ್ಲಿ ಇಂದು ಸಂಜೆ ಕಾರ್ತಿಕ ದೀಪ ಬೆಳಗುತ್ತಿದ್ದಂತೆಯೇ, ಬೆಟ್ಟದ ಕೆಳಭಾಗ ಹಾಗೂ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಭಾವುಕರಾಗಿ ಕಣ್ಣೀರಿಟ್ಟರು. ದಶಕಗಳ ಕಾಯುವಿಕೆ ಮತ್ತು ಕಾನೂನು ಹೋರಾಟದ ಬಳಿಕ ಬೆಟ್ಟದ ತುದಿಯಲ್ಲಿ ಮಹಾದೀಪ ಬೆಳಗಿದ್ದನ್ನು ಕಂಡ ಭಕ್ತರು “ವೆಟ್ರಿವೇಲ್ ಮುರುಗನುಕ್ಕು ಅರೋಗರಾ!” ಎಂಬ ಜಯಘೋಷಗಳನ್ನು ಮೊಳಗಿಸಿ ಭಕ್ತಿಪರವಶರಾದರು. ದೀಪ ಬೆಳಗುತ್ತಿದ್ದಂತೆ ಮನೆಯ ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದ ಯುವತಿಯೊಬ್ಬರು ಕಣ್ಣೀರು ಹಾಕುತ್ತಾ, ಹೂವಿನ ಎಸಳುಗಳನ್ನು ಎರಚುತ್ತಾ ಈ ಕ್ಷಣವನ್ನು ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More