ಎಲ್ಲರಿಗೂ ಒಳ್ಳೆಯದನ್ನು ಬಯಸಿ ವಿದಾಯ ಹೇಳಿದ ತಾಂಡವ್ ರಾಮ್
ಬಿಗ್ ಬಾಸ್ ಕನ್ನಡ ಸೀಸನ್ 13ರ ಮೂರನೇ ವಾರದಲ್ಲಿ ತಾಂಡವ್ ರಾಮ್ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಹೊರ ಹೋಗುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಹಾಗಾದರೆ, ತಾಂಡವ್ ರಾಮ್ ಅವರ ಎಕ್ಸಿಟ್ ಯಾವ ರೀತಿಯಲ್ಲಿ ಇತ್ತು? ಆ ಬಗ್ಗೆ ನಾವು ಇಂದು ಮಾಹಿತಿ ನೀಡುತ್ತಾ ಇದ್ದೇವೆ. ವಿವರವಾಗಿ ಕೇಳಿ. ಇದು ಕಲರ್ಸ್ ಕನ್ನಡದ ಪ್ರೋಮೋ ಆಧರಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮಿಡ್ ವೀಕ್ ಎಲಿಮಿನೇಷನ್ನಿಂದ ತಾಂಡವ್ ರಾಮ್ ಔಟ್ ಆಗಿದ್ದಾರೆ. ಇವರನ್ನು ಅತಿಯಾಗಿ ಮೆಚ್ಚಿಕೊಂಡ ಗಗನ್ ಚಿನ್ನಪ್ಪ ಕಣ್ಣೀರು ಹಾಕಿದ್ದಾರೆ. ಇನ್ನು, ಇವರ ವೋಟ್ ಕಸಿದುಕೊಂಡ ಧನುಷ್ ಅವರಿಗೆ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಆದರೆ, ತಾಂಡವ್ ರಾಮ್ ಮಾತ್ರ ಈ ವಿಷಯದಲ್ಲಿ ಚಿಲ್ ಆಗೇ ಇದ್ದರು. ಅವರು ಖುಷಿಯಿಂದಲೇ ದೊಡ್ಮನೆ ತೊರೆದಿದ್ದಾರೆ. ‘ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಾರೈಸಿಯೇ ಫ್ಲೈಟ್ ಏರಿ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ. ಅವರು ಮರಳುತ್ತಾರೆ ಎಂಬ ಸುದ್ದಿ ಇದೆಯಾದರೂ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ವೀಕೆಂಡ್ನಲ್ಲಿ ಸ್ಪಷ್ಟನೆ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
