‘ಕೆಜಿಎಫ್ 2’ ಬಗ್ಗೆ ಮೆಚ್ಚುಗೆಯ ಮಾತನಾಡಿದ ತೆಲುಗು ನಟ
ಇತ್ತೀಚೆಗೆ ತೆರೆಗೆ ಬಂದ ‘ಕೆಜಿಎಫ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಬಗ್ಗೆ ತನಿಕೆಲ್ಲ ಅವರಿಗೆ ಸಾಕಷ್ಟು ಹೆಮ್ಮೆ ಇದೆ. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ.
10 ವರ್ಷಗಳ ಹಿಂದೆ ತೆಲುಗಿನಲ್ಲಿ ರಿಲೀಸ್ ಆದ ‘ಮಿಥುನಮ್’ ಸಿನಿಮಾ (Mithunam ) ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗ್ತಿದೆ. ಈ ಚಿತ್ರಕ್ಕೆ ತನಿಕೆಲ್ಲ ಭರಣಿ ಅವರು ನಿರ್ದೇಶನ ಇದೆ . ಈ ಚಿತ್ರದಲ್ಲಿ ಎಸ್.ಪಿ .ಬಾಲಸುಬ್ರಹ್ಮಣ್ಯಂ (S. P. Balasubrahmanyam) ಹಾಗೂ ಲಕ್ಷ್ಮೀ ನಟಿಸಿದ್ದರು. ವಿಶೇಷ ಎಂದರೆ ಈ ಸಿನಿಮಾ ಈಗ ಕನ್ನಡಕ್ಕೆ ಡಬ್ ಆಗಿ ತೆರೆಕಾಣುತ್ತಿದೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡೋಕೆ ತನಿಕೆಲ್ಲ ಭರಣಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಅವರು ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು. ಜತೆಗೆ ಕನ್ನಡದ ಬಗ್ಗೆ ಇರುವ ವಿಶೇಷ ಪ್ರೀತಿ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ಇತ್ತೀಚೆಗೆ ತೆರೆಗೆ ಬಂದ ‘ಕೆಜಿಎಫ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಬಗ್ಗೆ ತನಿಕೆಲ್ಲ ಅವರಿಗೆ ಸಾಕಷ್ಟು ಹೆಮ್ಮೆ ಇದೆ. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.