ಹನಿ ಟ್ರ್ಯಾಪ್ ಮಾಡಲು ಬಂದವರ ಜೊತೆ ಸಚಿವನ ವಾಗ್ವಾದ ನಡೆದಿರೋದು ಸತ್ಯ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ Edited By:

Updated on: Mar 20, 2025 | 5:07 PM

ಹನಿ ಟ್ರ್ಯಾಪಿಂಗ್ ಕೃತ್ಯ ಯಾರಿಂದ ನಡೆಯುತ್ತಿದೆ ಇದರ ಹಿಂದೆ ಯಾರಿದ್ದಾರೆ ಅಂತ ತಾನು ಹೇಳಿದರೆ ಅದು ರಾಜಕೀಯ ಪ್ರೇರಿತ ಆರೋಪ ಅನಿಸಿಕೊಳ್ಳುತ್ತದೆ, ತನಿಖೆ ನಡೆದು ಏಜೆನ್ಸಿಯು ಸತ್ಯವನ್ನು ಹೊರಗೆಡಹಿದರೆ ಅದು ಪಕ್ಕಾ ಸಾಬೀತಾದ ಹಾಗೆ ಅಗುತ್ತದೆ, ಇದನ್ನು ಸ್ವಪಕ್ಷೀಯರೇ ಮಾಡಿರಬಹುದು ಅಥವಾ ಬೇರೆ ಪಕ್ಷದವರು-ಒಟ್ಟಿನಲ್ಲಿ ತಮ್ಮ ತಂಡದ ಒಂದು ವಿಕೆಟ್ ಉರುಳಿಸುವ ಪ್ರಯತ್ನವಂತೂ ನಡೆದಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಬೆಂಗಳೂರು, ಮಾರ್ಚ್ 20: ಸಚಿವರೊಬ್ಬರನ್ನು ಹನಿ ಟ್ರ್ಯಾಪ್ (honey trap) ಮಾಡಲು ನಡೆದಿರುವ ಪ್ರಯತ್ನ ರಾಜ್ಯದೆಲ್ಲಡೆ ಚರ್ಚೆಯಾಗುತ್ತಿದೆ. ಪ್ರಕರಣದ ಸ್ವಲ್ಪ ಮಾಹಿತಿ ಹೊಂದಿರುವ ಸಚಿವ ಸತೀಶ್ ಜಾರಕಿಹೊಳಿ, ಇಬ್ಬರು ಸಚಿವರನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನವೆಂದು ತಾನು ಹೇಳಿಲ್ಲ, ಅದರೆ ಒಬ್ಬ ಸಚಿವನ ವಿರುದ್ಧ ಎರಡು ಸಲ ಅದನ್ನು ಮಾಡುವ ಪ್ರಯತ್ನ ನಡೆದಿದೆ ಎನ್ನುತ್ತಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಜಾರಕಿಹೊಳಿ, ಸಚಿವನ ರಾಜಕೀಯ ತೇಜೋವಧೆ ಮಾಡಲು ಈ ಪ್ರಯತ್ನ ನಡೆದಿರಬಹುದು, ಅವರು ಎರಡನೇ ಸಲ ಟ್ರ್ಯಾಪ್ ಮಾಡಲು ಬಂದಾಗ ಅವರೊಂದಿಗೆ ಸಚಿವನ ವಾಗ್ವಾದವೂ ನಡೆದಿದೆ ಎಂದು ಜಾರಕಿಹೊಳಿ ಹೇಳಿದರು. ಯಾವುದಕ್ಕೂ ಟಾರ್ಗೆಟ್ ಆಗಿರುವ ಸಚಿವ ದೂರು ಸಲ್ಲಿಸಿದರೆ ಎಲ್ಲವೂ ನಿಚ್ಚಳವಾಗುತ್ತದೆ ಎಂದು ಸಚಿವ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಚಿವರೊಬ್ಬರು ಹನಿಟ್ರ್ಯಾಪ್ ಅಗಿರುವ ವಿಚಾರ ಗೊತ್ತಿಲ್ಲ, ಮಾಹಿತಿಯಿಲ್ಲದೆ ತೇಜೋವಧೆ ಮಾಡೋದು ಸರಿಯಲ್ಲ: ಬಾಲಕೃಷ್ಣ

Published on: Mar 20, 2025 04:58 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.