ಪ್ರವಾಸಕ್ಕೆಂದು ಮಕ್ಕಳನ್ನು ಠಾಣೆಗೆ ಕರೆ ತಂದ ಶಿಕ್ಷಕಿ, ಇಸ್ಪೀಟ್ ಆಟ ಆಡಲೇಬೇಕಾ ಸರ್​? ಪೊಲೀಸರಿಗೆ ಮಕ್ಕಳ ಪ್ರಶ್ನೆ

ಪ್ರವಾಸಕ್ಕೆಂದು ಮಕ್ಕಳನ್ನು ಠಾಣೆಗೆ ಕರೆ ತಂದ ಶಿಕ್ಷಕಿ, “ಇಸ್ಪೀಟ್ ಆಟ ಆಡಲೇಬೇಕಾ ಸರ್​”? ಪೊಲೀಸರಿಗೆ ಮಕ್ಕಳ ಪ್ರಶ್ನೆ

ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on: Dec 04, 2024 | 1:21 PM

ಚಿತ್ರದುರ್ಗದ ಶಿಕ್ಷಕಿ ಕಾಂಚನಾ ಅವರು ತಮ್ಮ ವಿದ್ಯಾರ್ಥಿಗಳನ್ನು ಬೈಲಕುಪ್ಪೆ ಪೊಲೀಸ್ ಠಾಣೆಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಇದರ ಉದ್ದೇಶ ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯವನ್ನು ನಿವಾರಿಸುವುದು ಮತ್ತು ಪೊಲೀಸ್ ಕಾರ್ಯವೈಖರಿಯನ್ನು ಅರ್ಥಮಾಡಿಸುವುದು. ಕಾಂಚನಾ ಅವರ ತಂದೆ 45 ವರ್ಷಗಳ ಹಿಂದೆ ಅಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದರು ಎಂಬುದು ವಿಶೇಷ.

ಮೈಸೂರು, ಡಿಸೆಂಬರ್​ 04: ಮೈಸೂರಿನಲ್ಲೊಂದು ಅಪರೂಪದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಶಿಕ್ಷಕಿ ಕಾಂಚನಾ ಅವರು ತಮ್ಮ ಸ್ವಂತ ಹಣದಲ್ಲಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.

ಶಿಕ್ಷಕಿ ಕಾಂಚನಾ ಅವರ ತಂದೆ ಶ್ರೀನಿವಾಸ ಮೂರ್ತಿ 45 ವರ್ಷದ ಹಿಂದೆ ಬೈಲಕುಪ್ಪೆ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಆಗಿದ್ದರು. ಠಾಣೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳ ನಾಮಫಲಕ ಪಟ್ಟಿಯಲ್ಲಿ ಶ್ರೀನಿವಾಸ ಮೂರ್ತಿ ಅವರ ಹೆಸರು ತೋರಿಸಲು ಮತ್ತು ಮತ್ತು ಮಕ್ಕಳಲ್ಲಿನ ಪೊಲೀಸ್​ ಭಯ ಹೋಗಲಾಡಿಸಲು ಸುಮಾರು 86 ವಿದ್ಯಾರ್ಥಿಗಳನ್ನು ಕಾಂಚನಾ ಪ್ರವಾಸಕ್ಕೆ ಕರೆತಂದಿದ್ದಾರೆ.

ಶಿಕ್ಷಕಿ ಕಾಂಚನಾ ಮಕ್ಕಳಿಗೆ ಪೊಲೀಸ್‌ ಠಾಣೆಯ ದೈನಂದಿನ ಕರ್ತವ್ಯದ ಬಗ್ಗೆ, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ, ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಬಳಿಕ ಮಕ್ಕಳು ಪೊಲೀಸರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಸರ್ ಇಸ್ಪೀಟ್ ಆಟವನ್ನು ಎಲ್ಲ ಕಡೆ ಆಡುತ್ತಾರಲಾ ಅದನ್ನು ಆಡಲೇಬೇಕಾ? ಆನ್ ಲೈನ್ ಗೇಮ್ ಎಲ್ಲ ಕಡೆ ಬರುತ್ತದಲ್ಲ ಅದನ್ನ ಯಾರ್ ಸರ್ ಆಡುವುದು? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ