ಉತ್ತರ ಭಾರತದ ಹಾಗೆ ದಕ್ಷಿಣ ಭಾರತದಲ್ಲೂ ಟೆಂಪಲ್ ಕಾರಿಡಾರ್ ನಿರ್ಮಿಸುತ್ತೇವೆ: ಕೆ ಅಣ್ಣಾಮಲೈ

|

Updated on: May 03, 2024 | 2:32 PM

ಪ್ರಜ್ವಲ್ ರೇವಣ್ಣ ಪ್ರಕರಣ ರಾಜ್ಯದಲ್ಲಿ ಬಿಜೆಪಿ ಅವಕಾಶಗಳ ಮೇಲೆ ಯಾವ ಪರಿಣಾಮವೂ ಬೀರದು ಎಂದ ಅಣ್ಣಾಮಲೈ, ಬಿಜೆಪಿ ನಿಲುವನ್ನು ತಮ್ಮ ನಾಯಕ ಅಮಿತ್ ಶಾ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಅಂತ ಹೇಳಿದರು.

ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಉಡುಪಿಯ ಬೈಂದೂರಲ್ಲಿ ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (K Annamalai) ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ (BY Raghavendra) ಪರ ಪ್ರಚಾರ ಮಾಡಿದರು. ಬಿಡುವು ಮಾಡಿಕೊಂಡು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕ್ಷೇತ್ರದಿಂದ ರಾಘವೇಂದ್ರ ಅವರು ಕನಿಷ್ಟ ಮೂರು ಲಕ್ಷ ವೋಟುಗಳ ಅಂತರದಿಂದ ಗೆಲ್ಲಲಿದ್ದಾರೆ, ಮತ್ತು ಇದನ್ನು ಅರಿತೇ ಹತಾಷರಾಗಿರುವ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರನ್ನು (Rahul Gandhi) ಕರೆತಂದಿದ್ದಾರೆ, ನಿನ್ನೆ ಅವರ ಭಾಷಣವನ್ನು ಭಾಷಾಂತರ ಮಾಡುವಾಗ ನಡೆದ ಕಾಮಿಡಿಯನ್ನು ಎಲ್ಲರೂ ನೋಡಿದ್ದೇವೆ ಎಂದರು. ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣ ರಾಜ್ಯದಲ್ಲಿ ಬಿಜೆಪಿ ಅವಕಾಶಗಳ ಮೇಲೆ ಯಾವ ಪರಿಣಾಮವೂ ಬೀರದು ಎಂದ ಅಣ್ಣಾಮಲೈ, ಬಿಜೆಪಿ ನಿಲುವನ್ನು ತಮ್ಮ ನಾಯಕ ಅಮಿತ್ ಶಾ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಅಂತ ಹೇಳಿದರು. ಉತ್ತರ ಭಾರತದಲ್ಲಿ ಪ್ರಧಾನ ಮಂತ್ರಿ ಮೋದಿಯವರು ಟೆಂಪಲ್ ಕಾರಿಡಾರ್ ಗಳನ್ನು ನಿರ್ಮಿಸಿದಂತೆಯೇ ದಕ್ಷಿಣ ಭಾರತದಲ್ಲೂ ದೇವಸ್ಥಾನಗಳ ಕಾರಿಡಾರ್ ಮಾಡುವ ಯೋಚನೆ ಬಿಜೆಪಿಗಿದೆ. ತಿರುನಾಮಲೈಯಲ್ಲಿ ಒಂದು ಕಾರಿಡಾರ್ ಮಾಡುವ ಬಗ್ಗೆ ಮೋದಿಯವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ, ಕರ್ನಾಟಕದ ಕೊಲ್ಲೂರಲ್ಲಿ ಕಾರಿಡಾರ್ ಸ್ಥಾಪಿಸಿ ಅದನ್ನು ಪ್ರಧಾನಿ ಮೋದಿಯವರಿಂದಲೇ ಪ್ರತಿಷ್ಠಾಪಿಸುತ್ತೇವೆ ಎಂದು ಅಣ್ಣಾಮಲೈ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  K. Annamalai: ನೇಹಾ ಕೊಲೆ ಬಗ್ಗೆ ಕೆ ಅಣ್ಣಾಮಲೈ ಮಾತು: ಕಾಂಗ್ರೆಸ್​ ವಿರುದ್ಧ ವಾಗ್ದಾಳಿ