ಎಂಪಿ ಕ್ವಾರ್ಟರ್ಸ್​ನ ಮೇಲ್ಗಡೆ ರೂಮಿನಲ್ಲಿ ಬಲಾತ್ಕರಿಸಿದ್ರು... ಪ್ರಜ್ವಲ್ ವಿರುದ್ಧ ಸಂತ್ರಸ್ತೆ ದೂರು

ಎಂಪಿ ಕ್ವಾರ್ಟರ್ಸ್​ನ ಮೇಲ್ಗಡೆ ರೂಮಿನಲ್ಲಿ ಬಲಾತ್ಕರಿಸಿದ್ರು… ಪ್ರಜ್ವಲ್ ವಿರುದ್ಧ ಸಂತ್ರಸ್ತೆ ದೂರು

ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 03, 2024 | 3:20 PM

Prajwal Revanna sex scandal, rape victim FIR details: ಪ್ರಜ್ವಲ್ ರೇವಣ್ಣ ಅವರ ಎಂಪಿ ಕ್ವಾರ್ಟರ್ಸ್​ಗೆ ಹೋದಾಗ ಮೇಲ್ಗಡೆಯ ರೂಮಿನಲ್ಲಿ ಕಾಯಲು ಹೇಳಿದರು. ಬಳಿಕ ಅಲ್ಲಿ ಬಂದು ಅವರು ನನ್ನ ಮೇಲೆ ಬಲಾತ್ಕಾರ ಮಾಡಿದರು. ವಿಡಿಯೋ ಚಿತ್ರೀಕರಣ ಕೂಡ ಮಾಡಿದರು. ಯಾರ ಬಳಿಯಾದರೂ ಬಾಯಿ ಬಿಟ್ಟರೆ ವಿಡಿಯೋ ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದರು. ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಅತ್ಯಾಚಾರ ಸಂತ್ರಸ್ತೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಗಳೂರು, ಮೇ 3: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ದಾಖಲಾಗಿರುವ ಎಫ್​ಐಆರ್​ನಲ್ಲಿ ಅತ್ಯಾಚಾರದ ದೂರು ಇದೆ. ಪ್ರಜ್ವಲ್ ರೇವಣ್ಣ ತಮ್ಮ ಅಧಿಕಾರ ದುರುಪಯೋಗ ಮಾಡಿ ತನ್ನ ಮೇಲೆ ಹೇಗೆ ಲೈಂಗಿಕ ದೌರ್ಜನ್ಯ (sexual harassment) ಎಸಗಿದರು ಎಂದು ಅತ್ಯಾಚಾರ ಸಂತ್ರಸ್ತೆ ವಿವರಿಸಿದ್ದಾರೆ. ಪ್ರಜ್ವಲ್ ಅಧಿಕಾರ ದುರುಪಯೋಗಿಸಿ ದೌರ್ಜನ್ಯ ಎಸಗಿದ್ದಾರೆ. ಭಯಪಡಿಸಿ ಬಲಾತ್ಕಾರ ಮಾಡಿದ್ದಾರೆ. ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಈ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರ, ಬ್ಲ್ಯಾಕ್​ಮೇಲ್, ಅಧಿಕಾರ ದುರುಪಯೋಗ ಮತ್ತು ಕೊಲೆ ಬೆದರಿಕೆ ಈ ಎಲ್ಲಾ ಗಂಭೀರ ಸ್ವರೂಪದ ಆರೋಪಗಳು ಎಫ್​ಐಆರ್​ನಲ್ಲಿವೆ.

ಎಂಪಿ ಕ್ವಾರ್ಟರ್ಸ್​ಗೆ ಹೋದಾಗ ಮೇಲ್ಗಡೆಯ ರೂಮಿನಲ್ಲಿ ವೇಟ್ ಮಾಡಲು ಹೇಳಿದರು. ಅಲ್ಲಿ ಹೋದಾಗ ಪ್ರಜ್ವಲ್ ರೇವಣ್ಣ ಬಲಾತ್ಕಾರ ಮಾಡಿದರು. ವಿಡಿಯೋ ಚಿತ್ರೀಕರಿಸಿ, ಯಾರ ಬಳಿಯಾದರೂ ಬಾಯಿಬಿಟ್ಟರೆ ಬಹಿರಂಗಪಡಿಸುತ್ತೇನೆ. ಗಂಡನನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದರು ಎಂದೂ ಸಂತ್ರಸ್ತೆ ತಿಳಿಸಿದ್ದಾರೆ.

ಮನೆಗೆಲಸದವರು ನೀಡಿದ ಮೊದಲ ದೂರಿನಲ್ಲಿ ಎಚ್​ಡಿ ರೇವಣ್ಣ ಎ1 ಆರೋಪಿಯಾಗಿದ್ದಾರೆ. ಅದರಲ್ಲಿ ಲೈಂಗಿಕ ಕಿರುಕುಳ ಆರೋಪ ಇತ್ತೇ ವಿನಃ ಅತ್ಯಾಚಾರ ಆರೋಪ ಇಲ್ಲ. ಆದರೆ, ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಎರಡನೇ ಎಫ್​ಐಆರ್​ನಲ್ಲಿ ಗಂಭೀರ ಆರೋಪಗಳಿವೆ. ಇದು ಪ್ರಜ್ವಲ್​ಗೆ ಮುಳುವಾಗಬಹುದು.

ಇದನ್ನೂ ಓದಿ: ಹೆಚ್ ಡಿ ರೇವಣ್ಣ ಹೊಳೆನರಸೀಪುರ ಮನೆ ಬಾಗಿಲಿಗೆ ಪೊಲೀಸರು, ಹೆಚ್ಚಿದ ಭವಾನಿ ರೇವಣ್ಣ ಆತಂಕ

ಇದೇ ವೇಳೆ ನಿನ್ನೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಮಾಜಿ ಸಚಿವ ರೇವಣ್ಣ ಅವರು ಇಂದು ಅರ್ಜಿ ಹಿಂಪಡೆಯುತ್ತಿದ್ದಾರೆ. ಅವರ ಮೇಲೆ ದಾಖಲಾಗಿರುವ ದೂರು ನಾನ್ ಬೇಲಬಲ್ ಅಲ್ಲ. ಸುಲಭವಾಗಿ ಜಾಮೀನು ಸಿಗುತ್ತದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ