ಸೆಲಿಬ್ರಿಟಿಯಾಗಿರುವ ಕಾರಣ ಹೋದೆಡೆಯೆಲ್ಲ ಜನ ಸೇರುತ್ತಾರೆ, ಆತ್ಮರಕ್ಷಣೆಗಾಗಿ ಗನ್ ಬೇಕು: ದರ್ಶನ್ ತೂಗುದೀಪ

|

Updated on: Jan 16, 2025 | 2:44 PM

ಪೊಲೀಸರಿಗೆ ನೀಡಿರುವ ತಮ್ಮ ಜವಾಬಿನಲ್ಲಿ ನಟ ದರ್ಶನ್, ತಾನೊಬ್ಬ ಸೆಲಿಬ್ರಿಟಿ ಮತ್ತು ಸಾರ್ವಜನಿಕವಾಗಿ ಓಡಾಡುವ ವ್ಯಕ್ತಿ, ತಾನು ಹೋದ ಕಡೆಯೆಲ್ಲ ಜನ ಸೇರುತ್ತಾರೆ, ಖಾಸಗಿ ಭದ್ರತೆ ತನಗಿರುವುದು ನಿಜವಾದರೂ ಅತ್ಮರಕ್ಷಣೆಗಾಗಿ ಗನ್ ಬೇಕಾಗುತ್ತದೆ, ಹಾಗಾಗಿ ದಯವಿಟ್ಟು ತನ್ನ ಗನ್ ಲೈಸೆನ್ಸ್ ರದ್ದು ಮಾಡಬಾರದೆಂದು ಹೇಳಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಅರೋಪದಲ್ಲಿ ಚಿತ್ರನಟ ದರ್ಶನ್ ಬಂಧನವಾದಾಗಲೇ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿರುವ ಪಿಸ್ಟಲ್ ಮುಟ್ಟುಗೋಲು ಹಾಕಿಕೊಂಡು ಗನ್ ಲೈಸೆನ್ಸ್ ರದ್ದು ಮಾಡಬೇಕೆಂಬ ನಿರ್ಧಾರವನ್ನು ಪೊಲೀಸರು ತೆಗೆದುಕೊಂಡಿದ್ದರು. ಅವರು ಜೈಲಲ್ಲಿದ್ದ ಕಾರಣ ವಿಷಯ ಕೊಂಚ ನೆನೆಗುದಿಗೆ ಬಿದ್ದಿದ್ದು ಸತ್ಯ. ಈಗ ಅವರು ಜಾಮೀನು ಪಡೆದು ಹೊರಬಂದಿರುವ ಹಿನ್ನೆಲೆಯಲ್ಲಿ ತಮ್ಮ ಬಳಿಯಿರುವ ಪಿಸ್ಟಲ್ ಬಳಸಿ ಸಾಕ್ಷಿಗಳನ್ನು ಹೆದರಿಸುವ ಸಾಧ್ಯತೆ ಇದೆ, ಹಾಗಾಗಿ ಅವರ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು ಎಂದು ಜನವರಿ 7ರಂದು ನಟನಿಗೆ ಪೊಲೀಸರು ನೋಟೀಸೊಂದನ್ನು ನೀಡಿದ್ದರು. ನೋಟೀಸ್ ಗೆ ಉತ್ತರಿಸಿರುವ ದರ್ಶನ್ ಲೈಸನ್ಸ್ ರದ್ದು ಮಾಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ

Published on: Jan 16, 2025 01:21 PM