ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ

ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ

ಮದನ್​ ಕುಮಾರ್​
|

Updated on: Jan 15, 2025 | 5:38 PM

ನಟ ದರ್ಶನ್ ಅವರ ಬೆನ್ನು ನೋವು ಕಡಿಮೆ ಆಗುತ್ತಿದೆ. ಫಾರ್ಮ್​ ಹೌಸ್​ನಲ್ಲಿ ಅವರು ಸಂಕ್ರಾಂತಿ ಹಬ್ಬ ಆಚರಿಸಿದರು. ಇಂದು (ಜನವರಿ 15) ಆರತಿ ಉಕ್ಕಡಕ್ಕೆ ಅವರು ಭೇಟಿ ನೀಡಿದ್ದು, ಅಹಲ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬದವರು ಮತ್ತು ಆಪ್ತರ ಜೊತೆ ಅವರು ದೇವಸ್ಥಾನಕ್ಕೆ ಬಂದಿದ್ದಾರೆ. ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಆರತಿ ಉಕ್ಕಡಕ್ಕೆ ನಟ ದರ್ಶನ್ ಅವರು ಭೇಟಿ ನೀಡಿದ್ದಾರೆ. ಸಂಕಷ್ಟ ಪರಿಹಾರಕ್ಕೆ ಅವರು ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ. ಅಹಲ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮೇಲುಕೋಟೆ ಶಾಸಕ‌ ದರ್ಶನ್ ಪುಟ್ಟಣಯ್ಯ, ನಟ ಧನ್ವೀರ್ ಕೂಡ ಬಂದು ಪೂಜೆ ಮಾಡಿಸಿದ್ದಾರೆ. ದೃಷ್ಟಿ ಮತ್ತು ಸಂಕಷ್ಟ ನಿವಾರಣೆಗೆ ದರ್ಶನ್ ತಡೆ ಹೊಡೆಸಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಕೂಡ ಸಾಥ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.