- Kannada News Photo gallery Darshan Celebrates Sankranti with wife Vijayalkashmi After Bail: Viral Photos and Updates Cinema News in Kannada
ದರ್ಶನ್, ವಿಜಯಲಕ್ಷ್ಮೀ, ವಿನೀಶ್; ಹ್ಯಾಪಿ ಫ್ಯಾಮಿಲಿಯ ಫೋಟೋ ನೋಡಿ
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಕುಟುಂಬದೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಈ ಸಮಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಪತ್ನಿ ವಿಜಯಲಕ್ಷ್ಮೀ ಮತ್ತು ಮಗ ವಿನೀಶ್ ಜೊತೆಗಿನ ಚಿತ್ರಗಳು ಅಭಿಮಾನಿಗಳಿಗೆ ಸಂತಸ ತಂದಿವೆ.
Updated on:Jan 15, 2025 | 2:19 PM

ನಟ ದರ್ಶನ್ ಅವರು ಕಳೆದ ಆರು ತಿಂಗಳಲ್ಲಿ ಸಾಕಷ್ಟು ಬೀಳುಗಳನ್ನು ಕಂಡರು. ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿ ಸಾಕಷ್ಟು ತೊಂದರೆ ಅನುಭವಿಸಿದರು. ಈಗ ದರ್ಶನ್ ಅವರು ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ.

ದರ್ಶನ್ ಅವರು ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬವೂ ಇದರಲ್ಲಿ ಭಾಗಿ ಆಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಈ ಫೋಟೋ ನೋಡಿದ ಅನೇಕರು ‘ಹ್ಯಾಪಿ ಫ್ಯಾಮಿಲಿ’ ಎಂದು ಕಮೆಂಟ್ ಮಾಡುತ್ತಾ ಇದ್ದಾರೆ.

ದರ್ಶನ್ ಅವರು ಮಗ ವಿನೀಶ್ ಹಾಗೂ ಸಹೋದರ ದಿನಕರ್ ಜೊತೆ ಪೋಸ್ ಕೊಟ್ಟಿದ್ದಾರೆ. ಅಣ್ಣ-ತಮ್ಮನ ಒಂದೇ ಫ್ರೇಮ್ನಲ್ಲಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ವೈರಲ್ ಆಗಿದೆ.

Darshan Thoogudeepa (4)
Published On - 11:44 am, Wed, 15 January 25



















