ಬೆಂಗಳೂರು: ಚಿರತೆ ಭಯದಿಂದ ಮದುವೆಗೆ ಆಗಮಿಸಿದ್ದು ಬೆರಳೆಣಿಕೆಯಷ್ಟು ಮಾತ್ರ ಅತಿಥಿಗಳು!
ಸುಮಾರು 2,000 ಕ್ಕೂ ಹೆಚ್ಚು ಜನರಿಗೆ ಆಮಂತ್ರಣ ಪತ್ರಿಕೆ ಹಂಚಲಾಗಿದ್ದರೂ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಮದುವೆಗೆ ಆಗಮಿಸಿದ್ದಾರೆ.
ಬೆಂಗಳೂರು: ಜನರಲ್ಲಿ ಮೂಡಿರುವ ಚಿರತೆ (leopard) ಭಯ ಅದ್ದೂರಿ ಮದುವೆ ಸಮಾರಂಭವೊಂದನ್ನು ಕಳಾಹೀನಗೊಳಿಸಿದ ಘಟನೆ ಬೆಂಗಳೂರು ನಗರದ ಹೊರವಲಯದಲ್ಲಿ ನಡೆದಿದೆ. ತುರಹಳ್ಳಿ ಅರಣ್ಯ ಪ್ರದೇಶದ (Turahalli Forest Area) ಸುತ್ತಮುತ್ತ ಚಿರತೆ ಓಡಾಡುತ್ತಿರುವುದು ಮತ್ತು ಜನ ಆತಂಕಗೊಂಡಿರುವ ಬಗ್ಗೆ ನಾವು ವರದಿ ಮಾಡುತ್ತಲೇ ಇದ್ದೇವೆ. ಇದೇ ಏರಿಯಾದಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ (auditorium) ಇವತ್ತು ಮದುವೆ ಸಮಾರಂಭವೊಂದು ನಡೆದಿದೆ. ಸುಮಾರು 2,000 ಕ್ಕೂ ಹೆಚ್ಚು ಜನರಿಗೆ ಆಮಂತ್ರಣ ಪತ್ರಿಕೆ ಹಂಚಲಾಗಿದ್ದರೂ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಮದುವೆಗೆ ಆಗಮಿಸಿದ್ದಾರೆ. ಖಾಲಿ ಕುರ್ಚಿಗಳು ಮತ್ತು ಖಾಲಿ-ಖಾಲಿ ಕಲ್ಯಾಣ ಮಂಟಪ ವಿಡಿಯೋದಲ್ಲಿ ಕಾಣುತ್ತವೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos