ವಾರಾಂತ್ಯದ ಲಾಕ್​ಡೌನ್ ಹಿನ್ನೆಲೆಯಲ್ಲಿ ಬದುಕಲು ಬೆಂಗಳೂರಿಗೆ ಬಂದ ಜನ ತಮ್ಮ ಊರುಗಳಿಗೆ ವಾಪಸ್ಸು ಹೋಗುತ್ತಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 07, 2022 | 5:13 PM

ಸರ್ಕಾರ ಲಾಕ್ ಡೌನ್ ಮಾಡುತ್ತಿರುವುದರಿಂದ ತನ್ನಂಥ ದಿನಗೂಲಿ ನೌಕರರಿಗೆ ಬಹಳ ತೊಂದರೆಯಾಗುತ್ತದೆ. ಶನಿವಾರ ಮತ್ತು ರವಿವಾರ ಎಲ್ಲಾ ಕಡೆ ಕೆಲಸ ಸ್ಥಗಿತಗೊಳ್ಳುವುದರಿಂದ ತನಗೆ ಎರಡು ದಿನ ಕೂಲಿ ಸಿಗದಂತಾಗುತ್ತದೆ, ಹಾಗಾಗೇ ತನ್ನೂರಿಗೆ ಹೋಗುತ್ತಿರುವುದಾಗಿ ಅವರು ಹೇಳಿದರು.

ಇತಿಹಾಸ ಮರುಕಳಿಸುತ್ತದೆ ಅಂತ ಹೇಳುತ್ತಾರೆ ಅದರೆ, ಕೋವಿಡ್-19 ಪಿಡುಗು ಮತ್ತು ಅದರ ಅಲೆಗಳು ಪದೇಪದೆ ಮರುಕಳಿಸುತ್ತಿವೆ ಮತ್ತು ಸಾಮಾನ್ಯ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಿವೆ. ಕರ್ನಾಟಕ ಸರ್ಕಾರ ಶುಕ್ರವಾರದಿಂದ ವೀಕೆಂಡ್ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂ ಘೋಷಿಸಿದೆ. ಮುಂಬರುವ ದಿನಗಳಲ್ಲಿ ಲಾಕ್ ಡೌನ್ ವಾರದ ದಿನಗಳಿಗೂ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಹಾಗಾಗೇ, ಬದುಕುವ ದಾರಿ ಹುಡುಕಿಕೊಂಡು ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬಂದಿರುವ ಜನ ವಾಪಸ್ಸು ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಕೇಂಪೇಗೌಡ ಬಸ್ ಟರ್ಮಿನಲ್ ನಲ್ಲಿ ಶುಕ್ರವಾರಂದು ಜನ ಎಂದಿಗಿಂತ ಜಾಸ್ತಿಯಿದ್ದರು. ಅವರಲ್ಲಿ ಬಹಳಷ್ಟು ಜನ ಲಾಕ್ಡೌನಲ್ಲಿ ಬೆಂಗಳೂರಿನಂಥ ದೊಡ್ಡ ನಗರದಲ್ಲಿ ಬದುಕು ನಡೆಸಲಾಗದು ಅಂದುಕೊಂಡು ತಮ್ಮೂರುಗಳಿಗೆ ಹೋಗುವವರಾಗಿದ್ದರು.

ಟಿವಿ9 ವರದಿಗಾರ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ತಮ್ಮ ಊರಿಗೆ ವಾಪಸ್ಸು ಹೋಗುತ್ತಿದ್ದ ವ್ಯಕ್ತಿಯೊಬ್ಬರೊಂದಿಗೆ ಮಾತಾಡಿದರು. ಸರ್ಕಾರ ಲಾಕ್ ಡೌನ್ ಘೋಷಿಸಿರುವುದರಿಂದ ಎರಡು ದಿನಗಳ ಕೆಲಸ ಇರುವುದಿಲ್ಲ ಹಾಗಾಗಿ ಊರಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದರು.

ಸರ್ಕಾರ ಲಾಕ್ ಡೌನ್ ಮಾಡುತ್ತಿರುವುದರಿಂದ ತನ್ನಂಥ ದಿನಗೂಲಿ ನೌಕರರಿಗೆ ಬಹಳ ತೊಂದರೆಯಾಗುತ್ತದೆ. ಶನಿವಾರ ಮತ್ತು ರವಿವಾರ ಎಲ್ಲಾ ಕಡೆ ಕೆಲಸ ಸ್ಥಗಿತಗೊಳ್ಳುವುದರಿಂದ ತನಗೆ ಎರಡು ದಿನ ಕೂಲಿ ಸಿಗದಂತಾಗುತ್ತದೆ, ಹಾಗಾಗೇ ತನ್ನೂರಿಗೆ ಹೋಗುತ್ತಿರುವುದಾಗಿ ಅವರು ಹೇಳಿದರು.

ಸರ್ಕಾರ ಲಾಕ್ ಡೌನ್ ಮಾಡುವ ಬದಲು ಕೋವಿಡ್ ಪಿಡುಗು ನಿಯಂತ್ರಣಕ್ಕೆ ಸಂಬಂಧಿಸಿದ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ದಿನಗೂಲಿ ಮಾಡುವ ಜನ ತಮ್ಮ ಊರುಗಳಿಗೆ ಹಿಂತಿರುಗುವ ಪ್ರಸಂಗ ಉದ್ಭವಿಸುವುದಿಲ್ಲ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:   Qatar Mail : ‘ನೀನು ನಮ್ಮಿಬ್ಬರ ವಿಡಿಯೋ ತೆಗೆದಿದ್ದೀಯಾ, ಮೊದಲು ಡಿಲೀಟ್ ಮಾಡು’ ಹೀಗೆಂದು ಆಕೆ ಗುಡುಗಿದಳು

Published on: Jan 07, 2022 05:13 PM