ಸೋನಲ್​ಗೆ ಅರುಂಧತಿ ನಕ್ಷತ್ರ ತೋರಿಸಿದ ತರುಣ್​ ಸುಧೀರ್​; ದಂಪತಿಗೆ ನಗುವೋ ನಗು

|

Updated on: Aug 11, 2024 | 2:43 PM

ಭಾರಿ ವೈಭವದಿಂದ ಸೋನಲ್​ ಮಾಂತೆರೋ ಹಾಗೂ ತರುಣ್​ ಸುಧೀರ್​ ಅವರ ಮದುವೆ ಬೆಂಗಳೂರಿನಲ್ಲಿ ಇಂದು (ಆಗಸ್ಟ್​ 11) ನಡೆದಿದೆ. ಆಪ್ತರು, ಸ್ನೇಹಿತರು ಹಾಗೂ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ವಿವಾಹ ಸಮಾರಂಭ ಜರುಗಿದೆ. ಈ ವೇಳೆ ಸೋನಲ್​ಗೆ ತರುಣ್​ ಅವರು ಅರುಂಧತಿ ನಕ್ಷತ್ರವನ್ನು ತೋರಿಸಿದರು. ಆ ಖುಷಿಖುಷಿಯ ಕ್ಷಣದ ವಿಡಿಯೋ ಇಲ್ಲಿದೆ ನೋಡಿ..

ಬೆಂಗಳೂರಿನಲ್ಲಿ ನಿರ್ದೇಶಕ ತರುಣ್​ ಸುಧೀರ್​ ಹಾಗೂ ನಟಿ ಸೋನಲ್​ ಮಾಂತೆರೋ ಅವರು ಹಸೆಮಣೆ ಏರಿದ್ದಾರೆ. ಇಂದು (ಆಗಸ್ಟ್​ 11) ಬಹಳ ಸಂಭ್ರಮದಿಂದ ಈ ಜೋಡಿಯ ಮದುವೆಯು ಹಿಂದೂ ಸಂಪ್ರದಾಯದಂತೆ ನಡೆದಿದೆ. ‘ರಾಬರ್ಟ್​’ ಸಿನಿಮಾದಲ್ಲಿ ಪರಸ್ಪರ ಪರಿಚಯವಾದ ಸೋನಲ್​ ಮತ್ತು ತರುಣ್​ ಅವರು ಪರಸ್ಪರ ಪ್ರೀತಿ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಎರಡೂ ಕುಟುಂಬದ ಒಪ್ಪಿಗೆ ಸಿಕ್ಕಿದ್ದರಿಂದ ಅವರಿಬ್ಬರು ಸತಿ-ಪತಿ ಆಗಿದ್ದಾರೆ. ಮದುವೆ ವೇಳೆ ಸೋನಲ್​ ಮಾಂತೆರೋ ಅವರಿಗೆ ತರುಣ್​ ಅವರು ಅರುಂಧತಿ ನಕ್ಷತ್ರ ತೋರಿಸಿದರು. ಈ ವೇಳೆ ಇಬ್ಬರಿಗೂ ನಗು ಬಂತು. ಆ ಖುಷಿಯ ಸಂದರ್ಭದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.