ದರ್ಶನ್ ಅನುಪಸ್ಥಿತಿಯಲ್ಲಿ ನಡೆಯಿತು ಮದುವೆ: ಎಮೋಷನಲ್ ಆದ ತರುಣ್ ಸುಧೀರ್
ದರ್ಶನ್ ಜೈಲಿನಲ್ಲಿ ಇರುವಾಗ ತಮ್ಮ ಮದುವೆ ನಡೆಯುತ್ತದೆ ಎಂದು ತರುಣ್ ಸುಧೀರ್ ಊಹಿಸಿರಲಿಲ್ಲ. ಆದರೆ ದರ್ಶನ್ಗೆ ಜಾಮೀನು ಸಿಗದ ಕಾರಣ ಅವರ ಅನುಪಸ್ಥಿತಿಯಲ್ಲಿ ಮದುವೆ ನಡೆಯುವುದು ಅನಿವಾರ್ಯ ಆಯಿತು. ನಟಿ ಸೋನಲ್ ಜೊತೆ ತರುಣ್ ಅವರು ಹಸೆಮಣೆ ಏರಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಭಾವುಕರಾದರು.
ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೇ ವೈಯಕ್ತಿಕ ಜೀವನದಲ್ಲೂ ತರುಣ್ ಸುಧೀರ್ ಮತ್ತು ದರ್ಶನ್ ನಡುವೆ ಉತ್ತಮ ಒಡನಾಟ ಇದೆ. ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತರುಣ್ ಸುಧೀರ್ ಮದುವೆ ಆಗಿದ್ದಾರೆ. ನಟಿ ಸೋನಲ್ ಮಾಂತೆರೋ ಜೊತೆ ತರುಣ್ ವಿವಾಹ ನೆರವೇರಿದೆ. ಈ ವೇಳೆ ತರುಣ್ ಸುಧೀರ್ ಅವರು ದರ್ಶನ್ ಬಗ್ಗೆ ಮಾತನಾಡುತ್ತಾ ಎಮೋಷನಲ್ ಆಗಿದ್ದಾರೆ. ‘ಆಗಸ್ಟ್ 11ರ ದಿನಾಂಕ ಮೊದಲೇ ನಿರ್ಧಾರ ಆಗಿತ್ತು. ಹಾಗಾಗಿ ನಾನು ಬಹಳ ಗೊಂದಲದಲ್ಲಿ ಇದ್ದೆ. ಮದುವೆಗೆ ನನ್ನನ್ನು ಹೆಚ್ಚು ಒತ್ತಾಯಿಸಿದ್ದು ನಮ್ಮ ತಾಯಿ. ಅವರನ್ನು ಬಿಟ್ಟರೆ ದರ್ಶನ್. ಅವರು ಅಲ್ಲಿಂದಲೇ ಆಶೀರ್ವಾದ ಮಾಡುತ್ತಾರೆ. ಅವರು ಹೊರಬಂದ ಬಳಿಕ ನಾವು ಹೋಗಿ ಆಶೀರ್ವಾದ ಪಡೆಯುತ್ತೇವೆ. ಜೀವನದಲ್ಲಿ ಇದು ಮಹತ್ವದ ಹಂತ. ಇದನ್ನು ನಮ್ಮ ಆತ್ಮೀಯರು ನೋಡಬೇಕು. ಅವರು ಇಲ್ಲ ಎಂದಾಗ ಎಮೋಷನಲ್ ಆಗುತ್ತೇವೆ’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos