ಜುಜುಬಿ ಸಮಾವೇಶದ ಕುರ್ಚಿಗಾಗಿ ಹೀಗೆ, ಒಂದು ವೇಳೆ ಸಿಎಂ ಕುರ್ಚಿ ಸಿಕ್ಕರೆ ಹೇಗೋ
ಕುರ್ಚಿಗಾಗಿ ಕೈ ಮುಖಂಡರು ಪರಸ್ಪರ ಗಲಾಟೆ ಮಾಡಿಕೊಂಡಿರುವಂತಹ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ: ಸಮಾವೇಶ ಆರಂಭಕ್ಕೂ ಮುನ್ನಲೇ ಕುರ್ಚಿಗಾಗಿ (chair) ಕೈ ಮುಖಂಡರು ಪರಸ್ಪರ ಗಲಾಟೆ ಮಾಡಿಕೊಂಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಇಂದು (ಡಿ. 30) ಕಾಂಗ್ರೆಸ್ ಪಕ್ಷದಿಂದ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಕೃಷ್ಣಾ ಜನಾಂದೋಲನ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಕುಳಿತುಕೊಳ್ಳಲು ಕೈ ಮುಖಂಡರು ಕೈ ಕೈ ಮಿಲಾಯಿಸಿದ್ದಾರೆ. ವೇದಿಕೆ ಕೆಳಗಡೆ ಹಾಕಲಾದ ಕುರ್ಚಿ ಮೇಲೆ ಕೂಡಲು ಮಹಿಳಾ ಮುಖಂಡರು ಕೂಡ ವಾಗ್ವಾದ ಮಾಡಿದರು. ಸದ್ಯ ಗಲಾಟೆಯ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos