ಬಿಜೆಪಿ ನಾಯಕರ ಮಾತು ಕೇಳಿ ರಾಜ್ಯಪಾಲರು 15 ಬಿಲ್ಗಳನ್ನು ವಾಪಸ್ಸು ಕಳಿಸಿದ್ದಾರೆ: ಶಿವಕುಮಾರ್
ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಯವರಿಗೆ ದೂರು ಸಲ್ಲಿಸಿದೆ ಏನೂ ಆಗುವುದಿಲ್ಲ ಅಂತ ನಮಗೆ ಚೆನ್ನಾಗಿ ಗೊತ್ತಿದೆ, ಹಾಗಾಗಿ ನಾವು ಹೋರಾಟವನ್ನು ರೂಪಿಸಿಕೊಂಡಿದ್ದೇವೆ ಮತ್ತು ಹೋರಾಟ ಮುಂದುವರಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಮೊದಲಾದವರು ಇಂದು ದೆಹಲಿಗೆ ಹೋಗುತ್ತಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್ ತಮ್ಮೊಂದಿಗೆ ಪರಮೇಶ್ವರ್ ಬರುತ್ತಿರುವ ಬಗ್ಗೆ ಮಾತಾಡಿ, ವರಿಷ್ಠರನ್ನು ಭೇಟಿಯಾಗಲು ಯಾರು ಬೇಕಾದರೂ ಹೋಗಬಹುದು ಎಂದು ಹೇಳಿದರು. ಹೈಕಮಾಂಡನ್ನು ಭೇಟಿಯಾಗುವ ಹಿಂದಿನ ಪ್ರಮುಖ ಅಜೆಂಡಾ ಬಗ್ಗೆ ಕೇಳಿದಾಗ ಅವರು, ಮಾಧ್ಯಮದವರಿಗೆ ಗೊತ್ತಿರುವ ಹಾಗೆ ರಾಜ್ಯಪಾಲರ ಕಚೇರಿಯ ದುರುಪಯೋಗವಾಗುತ್ತಿದೆ, ಬಿಜೆಪಿಯವರ ಮಾತು ಕೇಳಿ ರಾಜ್ಯಪಾಲರು ಸರ್ಕಾರ ಅನುಮೋದನೆಗೆ ಕಳಿಸಿದ್ದ 15 ಮಸೂದೆಗಳನ್ನು ವಾಪಸ್ಸು ಕಳಿಸಿದ್ದಾರೆ ಎಂದರು. ಅದರ ಜೊತೆಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ನೋಡಿರುವ ಅನುಮತಿ ಮತ್ತು ಪಕ್ಷದ ಹಾಗೂ ಸರ್ಕಾರದ ಹಲವು ವಿಷಯಗಳನ್ನು ವರಿಷ್ಠರೊಂದಿಗೆ ಚರ್ಚಿಸಬೇಕಿದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಾಸಿಕ್ಯೂಷನ್ ಅನುಮತಿಯನ್ನು ಹಿಂಪಡೆದರೆ ರಾಜ್ಯಪಾಲರು ಮುಖಭಂಗದಿಂದ ತಪ್ಪಿಸಿಕೊಳ್ಳಬಹುದು: ಶಿವಕುಮಾರ್