ದೇವಾಲಯದಲ್ಲಿ ಸುಮಲತಾ ಚಪ್ಪಲಿ ಕದ್ದ ಕಳ್ಳರು- ಬೆಂಬಲಿಗರು ಹೇಳಿದ್ದೇನು..?
ಸುದ್ದಿಗೋಷ್ಠಿಗೂ ಮುನ್ನ ಸುಮಲತಾ ಅವರು ಕಾಳಿಕಾದೇವಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದಿದ್ದು, ಈ ವೇಳೆ ದೇವಸ್ಥಾನದ ಹೊರಗಡೆ ಬಿಟ್ಟ ಚಪ್ಪಲಿಯನ್ನ ಕಳ್ಳ ಕದ್ದೊಯ್ದ ಘಟನೆ ನಡೆದಿದೆ.
ಮಂಡ್ಯ: ಸುದ್ದಿಗೋಷ್ಠಿಗೂ ಮುನ್ನ ಕಾಳಿಕಾದೇವಿ ದೇವಸ್ಥಾನಕ್ಕೆ ಹೋಗಿದ್ದ ಸುಮಲತಾ ಅವರು ಕಾಳಿಕಾ ದೇವಿಯ ದರ್ಶನ ಪಡೆದರು. ಆದರೆ ಇದೇ ವೇಳೆ ದೇವಸ್ಥಾನದ ಹೊರಗಡೆ ಇಟ್ಟಿದ್ದ ಸುಮಲತಾ ಅವರ ಚಪ್ಪಲಿಯನ್ನ ಕಳ್ಳ ಎತ್ತಿಕೊಂಡು ಹೋಗಿರುವ ಘಟನೆ ನಡೆದಿದೆ. ಇದೇ ವೇಳೆ ಸುಮಲತಾ ಜೊತೆ ಇದ್ದ ಬೆಂಬಲಿಗರು ಇದೊಂದು ಶುಭ ಸೂಚನೆ ಎಂದಿದ್ದಾರೆ. ಬಳಿಕ ಸುಮಲತಾ ಅವರು ದೇವಸ್ಥಾನದಿಂದ ಬರಿಗಾಲಿನಲ್ಲಿ ಬಂದು ಕಾರನ್ನು ಹತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos