Shivamogga: ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!

Edited By:

Updated on: Dec 18, 2025 | 12:57 PM

ಜನ ಸಾಮಾನ್ಯರ ಹಣ, ಬಂಗಾರವನ್ನು ಕಳ್ಳರು ಕದಿಯೋದು ಮಾಮೂಲು. ಆದ್ರೆ ಶಿವಮೊಗ್ಗದಲ್ಲಿ ಪೊಲೀಸರ ಕತ್ತಲ್ಲಿದ್ದ ಚಿನ್ನವನ್ನೇ ಎಗರಿಸಲಾಗಿದೆ. ಕರ್ತವ್ಯ ನಿರತ ಎಎಸ್​​ಐ ಅವರ ಕುತ್ತಿಗೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಮಾಂಗಲ್ಯಸರವನ್ನು ಕಳವು ಮಾಡಲಾಗಿದೆ. ಸರ ಕಳೆದುಕೊಂಡ ಎಎಸ್​ಐ ಕಣ್ಣೀರು ಹಾಕಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಿವಮೊಗ್ಗ, ಡಿಸೆಂಬರ್​​ 18: ಕರ್ತವ್ಯ ನಿರತ ಎಎಸ್ಐ ಮಾಂಗಲ್ಯಸರವನ್ನೇ ಕಳ್ಳರು ಕದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪ್ರತಿಭಟನೆ ಹಿನ್ನೆಲೆ ಶಿವಮೊಗ್ಗ ಬಿಜೆಪಿ ಕಚೇರಿಗೆ ಬಂದೋಬಸ್ತ್​​​ಗೆಂದು ASI ಅಮೃತಾಬಾಯಿ ಬಂದಿದ್ದರು. ಪ್ರತಿಭಟನೆ ವೇಳೆ ಕಳ್ಳರು ಕೈಚಳಕ ತೋರಿದ್ದು, ಅವರ ಕತ್ತಲ್ಲಿದ್ದ 60 ಗ್ರಾಂ ಮಾಂಗಲ್ಯಸರವನ್ನು ಕಳವು ಮಾಡಲಾಗಿದೆ. ಪೊಲೀಸ್​​ ಅಧಿಕಾರಿ ಎಂಬ ಭಯವೂ ಇಲ್ಲದೆ ಕಳ್ಳರು ಕೃತ್ಯ ನಡೆಸಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.