ಹಿಂದೂಗಳ ಹಿತಾಸಕ್ತಿ ಕಾಪಾಡುವಲ್ಲಿ ಹಿಂದಿನ ಮತ್ತು ಈಗಿನ ಸರ್ಕಾರಗಳು ವಿಫಲವಾಗಿವೆ: ಬಸನಗೌಡ ಯತ್ನಾಳ್
ಬಿಜೆಪಿ ಅಧಿಕಾರದಲ್ಲಿದ್ದಾಗ ಗೃಹ ಸಚಿವ ಅರಗ ಜ್ಞಾನೇಂದ್ರ ಹಿಂದೂಗಳ ರಕ್ಷಣೆ ಮಾಡಲಿಲ್ಲ, ಪೊಲೀಸರು ನನ್ನ ಮಾತೇ ಕೇಳಲ್ಲ ಏನು ಮಾಡೋದು ಅಂತ ಅಸಹಾಯಕತೆ ಪ್ರದರ್ಶಿಸಿದರು, ಬೊಮ್ಮಾಯಿ ಕೂಡ ಏನೂ ಮಾಡಲಿಲ್ಲ, ಹಿಂದೂ ಸಮುದಾಯದ ಜನರಲ್ಲಿ ತಾವು ಸುರಕ್ಷಿತರಲ್ಲ ಎಂಬ ಆತಂಕ ಮೂಡಿದ್ದಕ್ಕೆ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಯಿತು ಎಂದು ಯತ್ನಾಳ್ ಹೇಳಿದರು.
ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಮುಸಲ್ಮಾನರಿಗೆ ಕುಮ್ಮಕ್ಕು ನೀಡಿ ಹಿಂದೂಗಳ ವಿರುದ್ಧ ಗಲಭೆ ಮಾಡಿಸುವುದು ಸಿದ್ದರಾಮಯ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು. ಬೆಂಗಳೂರಲ್ಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದು, ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಆಕಳನ್ನು ಕೊಯ್ದಿರೋದು, ಶಿವಮೊಗ್ಗದಲ್ಲಿ ಹಸುಗಳ ಮಾಂಸ ಮಾರಾಟ-ಇವೆಲ್ಲ ಘಟನೆ ನಡೆಯುತ್ತಿದ್ರೂ ಸಿದ್ದರಾಮಯ್ಯ ಸುಮ್ಮನಿದ್ದಾರೆ, ಡಿಕೆ ಶಿವಕುಮಾರ್ ಮುಸಲ್ಮಾನರನ್ನು ನನ್ನ ಸಹೋದರರು ಅನ್ನುತ್ತಾರೆ ಎಂದು ಯತ್ನಾಳ್ ಹೇಳಿದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಮಾದರಿಯಲ್ಲಿ ಸರ್ಕಾರ ನಡೆಸಿದರೆ ಮಾತ್ರ ಹಿಂದೂ ಹಿತಾಸಕ್ತಿಯ ರಕ್ಷಣೆ ಸಾಧ್ಯ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರ ವಿರುದ್ಧ ಯತ್ನಾಳ್ ಫೋರ್ಜರಿ ಮತ್ತು ಸುಲಿಗೆಯ ಗಂಭೀರ ಆರೋಪ ಮಾಡಿದ್ದಾರೆ: ಪ್ರಿಯಾಂಕ್ ಖರ್ಗೆ