ಥೈಲ್ಯಾಂಡಿನ ಕಾಡಾನೆಯೊಂದಕ್ಕೆ ಒಂದು ನಿರ್ದಿಷ್ಟ ಮನೆಯ ಊಟ ಅಂದ್ರೆ ಬಹಳ ಇಷ್ಟ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 11, 2021 | 11:02 PM

ಗಜರಾಜ ಎರಡನೇ ಬಾರಿಗೆ ಈ ಮನೆಗೆ ದಾಳಿಯಿಟ್ಟಿದ್ದಾನೆ. ಆನೆಯ ನೆನಪಿನ ಶಕ್ತಿ ಅದರ ಅಕಾರದಂತೆ ಆಗಾಧ ಎಂದು ಹೇಳುತ್ತಾರೆ. ಸುಮಾರು ಎರಡು ತಿಂಗಳ ಹಿಂದೆ ಸಲಗ ಇದೇ ಮನೆಗೆ ಹೀಗೆ ಹಿಂದಿನಿಂದ ಬಂದು ಕಿಚನ್ ಗೋಡೆ ಒಡೆದು ಸೊಂಡಿಲಿಗೆ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡಿತ್ತಂತೆ.

ಕಾಡಾನೆಗಳು ಊರೊಳಗೆ ಬಂದು ಜನರ ನೆಮ್ಮದಿ ಮತ್ತು ಹೊಲ-ಗದ್ದೆಗಳೊಳಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುವುದು ಕೇವಲ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಮಾತ್ರ ನಡೆಯುವ ಕ್ರಿಯೆ ಅಲ್ಲ, ಬೇರೆ ದೇಶಗಳ ಕಾಡುಗಳಲ್ಲಿ ವಾಸ ಮಾಡುವ ಆನೆಗಳಿಗೂ ಇಂಥ ಬುದ್ಧಿ ಇದೆ. ಈ ವಿಡಿಯೋ ನೋಡಿ, ಥೈಲ್ಯಾಂಡ್ ದೇಶದ ದಕ್ಷಿಣ ಭಾಗಕ್ಕಿರುವ ಒಂದು ಚಿಕ್ಕ ಗ್ರಾಮದಲ್ಲಿ ಸಲಗನೊಬ್ಬ ಊರೊಳಗೆ ಪ್ರವೇಶಮಾಡಿ ಮನೆಯೊಂದರ ಕಿಚನ್ ಹಿಂಭಾಗದ ಗೋಡೆ ಒಡೆದು ಅಡುಗೆ ಮನೆಯಲ್ಲಿ ತನ್ನ ಸೊಂಡಿಲಿಗೆ ಸಿಕ್ಕಿದ್ದನ್ನೆಲ್ಲ ಬಾಯಿಗೆ ತುರುಕಿಕೊಳ್ಳುತ್ತಿದ್ದಾನೆ. ಆ ಮನೆಯವರು ಆಸಹಾಯಕರಾಗಿ ಆನೆಯ ಪುಂಡಾಟವನ್ನು ಟಾರ್ಚ್ ಲೈಟ್ನಲ್ಲಿ ನೋಡುತ್ತಿದ್ದಾರೆ. ಪಾಪ ಅದನ್ನು ಬಿಟ್ಟು ಅವರು ಬೇರೆ ಏನು ತಾನೆ ಮಾಡಬಹುದಿತ್ತು?

ಗಮ್ಮತ್ತಿನ ವಿಷಯವೇನು ಗೊತ್ತಾ? ಗಜರಾಜ ಎರಡನೇ ಬಾರಿಗೆ ಈ ಮನೆಗೆ ದಾಳಿಯಿಟ್ಟಿದ್ದಾನೆ. ಆನೆಯ ನೆನಪಿನ ಶಕ್ತಿ ಅದರ ಅಕಾರದಂತೆ ಆಗಾಧ ಎಂದು ಹೇಳುತ್ತಾರೆ. ಸುಮಾರು ಎರಡು ತಿಂಗಳ ಹಿಂದೆ ಸಲಗ ಇದೇ ಮನೆಗೆ ಹೀಗೆ ಹಿಂದಿನಿಂದ ಬಂದು ಕಿಚನ್ ಗೋಡೆ ಒಡೆದು ಸೊಂಡಿಲಿಗೆ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡಿತ್ತಂತೆ. ಅದಾದ ಮೇಲೆ ಮನೆಯ ಮಾಲೀಕ ಗೋಡೆಯನ್ನು ಮತ್ತೇ ಕಟ್ಟಿಸಿದ್ದ. ಈಗ ಎರಡನೇ ಬಾರಿ ಕಟ್ಟಿಸಬೇಕಿದೆ.

ಈ ಮನೆಯ ಅದ್ಯಾವ ತಿಂಡಿ ಅಥವಾ ಊಟ ಗಜರಾಜನಿಗೆ ಇಷ್ಟವಾಗಿದೆಯೋ? ಈ ವಿಷಯಕ್ಕೆ ಸಂಬಂಧಿಸಿದಂತೆ ಮನೆಯೊಡತಿ ಹೆಮ್ಮೆಪಟ್ಟುಕೊಳ್ಳಲೇ ಬೇಕು. ಮೂರನೆ ಬಾರಿಗೆ ಆನೆ ಬಾರದಂತೆ ಅವರು ತೆಗೆದುಕೊಂಡಿರಬಹುದಾದ ಕ್ರಮದ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಇದನ್ನೂ ಓದಿ:  ‘ಸೂಪರ್’ ಚಿತ್ರದ ನಟಿ ನಯನತಾರಾ ಎಂಗೇಜ್​​ಮೆಂಟ್​; ಇಲ್ಲಿದೆ ರಿಂಗ್​ ಜೊತೆ ವಿಡಿಯೋ ಸಾಕ್ಷಿ