‘ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ’; ದರ್ಶನ್ ಬಗ್ಗೆ ರಾಕ್​ಲೈನ್ ವೆಂಕಟೇಶ್ ಮಾತು

Updated on: Aug 12, 2024 | 11:38 AM

Rockline Venkatesh on Darshan: ಕಲಾವಿದರ ಸಂಘ ಇಷ್ಟು ದಿನ ಸೈಲೆಂಟ್ ಆಗಿತ್ತು. ಈಗ ಕಲಾವಿದರ ಸಂಘದಲ್ಲಿ ಹೋಮ-ಹವನ ಮಾಡಿಸಲಾಗುತ್ತಿದೆ. ಈ ವಿಚಾರ ಅಚ್ಚರಿ ತಂದಿದೆ. ದರ್ಶನ್ ಬಂಧನಕ್ಕೆ ಒಳಗಾಗಿರುವುದರಿಂದಲೇ ಈ ಹವನ ಮಾಡಿಸಲಾಗುತ್ತಿದೆ ಎಂದು ಅನೇಕರು ಭಾವಿಸಿದ್ದರು. ಈ ಬಗ್ಗೆ ರಾಕ್​ಲೈನ್ ವೆಂಕಟೇಶ್ ಮಾತನಾಡಿದ್ದಾರೆ.

ದರ್ಶನ್ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಅವರು ಹೊರಕ್ಕೆ ಬರಲಿ ಎಂದು ಫ್ಯಾನ್ಸ್ ಹಾಗೂ ಕುಟುಂಬದವರು ಕೋರುತ್ತಿದ್ದಾರೆ. ಈ ಬೆನ್ನಲ್ಲೇ ಕಲಾವಿದರ ಸಂಘದಲ್ಲಿ ಚಿತ್ರರಂಗದ ಒಳಿತಿಗೆ ಹೋಮ-ಹವನ ಮಾಡಿಸಲಾಗುತ್ತಿದೆ. ಇಷ್ಟು ವರ್ಷ ಇಲ್ಲದೆ ಇರುವುದು ಈಗೇಕೆ ಎನ್ನುವ ಪ್ರಶ್ನೆ ಮೂಡೋದು ಸಹಜ. ದರ್ಶನ್ ಬಂಧನಕ್ಕೆ ಒಳಗಾಗಿರುವುದರಿಂದಲೇ ಈ ಹವನ ಮಾಡಿಸಲಾಗುತ್ತಿದೆ ಎಂದು ಅನೇಕರು ಭಾವಿಸಿದ್ದರು. ಈ ಬಗ್ಗೆ ರಾಕ್​ಲೈನ್ ವೆಂಕಟೇಶ್ ಮಾತನಾಡಿದ್ದಾರೆ. ‘ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲಿ. ಚಿತ್ರರಂಗದ ಕುಟುಂಬದವರಿಂದ ಒಬ್ಬರು ಬಂಧನಕ್ಕೆ ಒಳಗಾಗಿದ್ದಾಗ ನಾನು ಫೀಲ್ ಮಾಡುತ್ತೇನೆ. ಅವರಿಗಾಗಿ ಹೋಮ-ಹವನ ಮಾಡಿಸುತ್ತಿದ್ದೇವೆ ಎಂದು ಯಾರಾದರೂ ಭಾವಿಸಿದ್ದರೆ ಆ ರೀತಿ ಇಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 12, 2024 11:25 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More