ಪ್ರಶಾಂತ್ ಕೊಲೆ ಬೆಳಕಿರುವಾಗ ಮತ್ತು ಜನವಸತಿ ಪ್ರದೇಶದಲ್ಲಿ ನಡೆದರೂ ಯಾರಿಗೂ ಅದು ಗೊತ್ತಾಗಿಲ್ಲ!
ಹಂತಕರು ಲಾಂಗು ಮಚ್ಚುಗಳೊಂದಿಗೆ ಆಟೋವೊಂದರಲ್ಲಿ ಬಂದು ಪ್ರಶಾಂತ್ ಅವರನ್ನು ಈ ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ತಮ್ಮ ವಾಹನದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಅದರೂ ಸಾವರಿಸಿಕೊಂಡು ಮತ್ತೊಂದು ತಿರುವಿನತ್ತ ಓಡಲಾರಂಭಿಸಿದ್ದಾರೆ.
Hassan: ಬುಧವಾರ ಸಾಯಂಕಾಲ ನಡೆದ ಹಾಸನದ ಜೆಡಿ(ಎಸ್) ಮುಖಂಡ ಮತ್ತು ನಗರ ಸಭಾ ಸದಸ್ಯ (councilor) ಪ್ರಶಾಂತ್ ನಾಗರಾಜ್ (Prashanth Nagaraj) ಹತ್ಯೆ ನಗರವನ್ನು ಬೆಚ್ಚಿಬೀಳಿಸಿದೆ. ರಾಜಕೀಯದಲ್ಲಿ ಉತ್ತಮ ಭವಿಷ್ಯ ಹೊಂದಿದ್ದ 42-ವರ್ಷ-ವಯಸ್ಸಿನ ಪ್ರಶಾಂತ್ ಅವರನ್ನು ಯಾಕೆ ಅಷ್ಟು ಬರ್ಬರವಾಗಿ ಕೊಲ್ಲಲಾಯಿತು ಅನ್ನೋದು ಪಕ್ಷದ ನಾಯಕರಿಗೆ (party leaders) ಅರ್ಥವಾಗುತ್ತಿಲ್ಲ. ಟಿವಿ9 ಕನ್ನಡ ವಾಹಿನಿಯ ಹಾಸನ ವರದಿಗಾರ ಮಂಜುನಾಥ ಕೆ ಬಿ ಅವರು ಹತ್ಯೆ ನಡೆದ ಸ್ಥಳ ಮತ್ತು ಹೇಗೆ ನಡೆಯಿತು ಅಂತ ವಿವರಣೆ ನೀಡಿದ್ದಾರೆ. ಲಕ್ಷ್ಮಿಪುರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅವರು ಪ್ರತಿದಿನ ಓಡಾಡುತ್ತಿದ್ದರಂತೆ. ಬುಧವಾರವೂ ಅವರು ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುವಾಗ ಭೀಕರ ಆಕ್ರಮಣ ನಡೆದಿದೆ.
ಹಂತಕರು ಲಾಂಗು ಮಚ್ಚುಗಳೊಂದಿಗೆ ಆಟೋವೊಂದರಲ್ಲಿ ಬಂದು ಪ್ರಶಾಂತ್ ಅವರನ್ನು ಈ ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ತಮ್ಮ ವಾಹನದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಅದರೂ ಸಾವರಿಸಿಕೊಂಡು ಮತ್ತೊಂದು ತಿರುವಿನತ್ತ ಓಡಿಲಾರಂಭಿಸಿದ್ದಾರೆ. ಆದರೆ ಹಂತಕರು ಅವರನ್ನು ಬೆನ್ನಟ್ಟಿ ಹರಿತವಾದ ಆಯುಧಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಪ್ರಶಾಂತ್ ಉಸಿರು ನಿಲ್ಲಿಸುವವರೆಗೆ ಹಂತಕರು ತಿವಿದಿದ್ದಾರೆ, ಚುಚ್ಚಿದ್ದಾರೆ.
ಸೋಜಿಗದ ಸಂಗತಿಯೆಂದರೆ, ಕೊಲೆ ನಡೆದ ಸ್ಥಳ ಜನವಸತಿ ಪ್ರದೇಶವಾಗಿದೆ ಮತ್ತು ಹಲ್ಲೆ ನಡೆದಿದ್ದು ಸಾಯಂಕಾಲ 6.30 ಕ್ಕೆ ಅಂದರೆ ಇನ್ನೂ ಬೆಳಕಿರುವಾಗಲೇ, ಆದಾಗ್ಯೂ ಅದು ಯಾರಿಗೂ ಗೊತ್ತಾಗಿಲ್ಲವೇ ಅನ್ನೋದು. ಅಥವಾ ಜನ ಹೆದರಿ ತಮ್ಮ ಮನೆಗಳಿಂದ ಹೊರಬರದಿರಲು ನಿಶ್ಚಯಿಸಿದರೇ?
ಹಂತಕರು ಎಷ್ಟು ಜನ ಇದ್ದರು, ಅವರ ಮೋಟಿವ್ ಏನಾಗಿತ್ತು ಅಂತ ಗೊತ್ತಾಗಿಲ್ಲ. ಆಟೋನಲ್ಲಿ ಬಂದಿದ್ದರೆಂದರೆ ಚಾಲಕನನ್ನು ಸೇರಿ 4-5 ಜನ ಇದ್ದಾರು. ಚಾಲಕನೂ ಅವರ ಕಡೆಯವನೇ ಆಗಿರುತ್ತಾನೆ. ಎಲ್ಲ ವಿವರಗಳನ್ನು ಪೊಲೀಸರೇ ನೀಡಬೇಕು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.