Loading video

ನಂದಿನಿ ರೋಪ್​ವೇ ಯೋಜನೆಗೆ ಎಂಓಯು ಪಡೆಯುವುದು ಸಂಸದ ಸುಧಾಕರ್​ಗೆ ಆಗಿರಲಿಲ್ಲ: ಡಾ ಎಂಸಿ ಸುಧಾಕರ್

Updated on: Jun 21, 2025 | 3:37 PM

ಸಂಸದ ಸುಧಾಕರ್ ಅವರಿಗೆ ಮಂತ್ರಿಯಾಗಿದ್ದಾಗ್ಯೂ ಜಿಲ್ಲಾಸ್ಪತ್ರೆಗೆ ಒಂದು ಎಂಆರ್​ಐ ಮಶೀನ್ ತಂದು ಹಾಕಲಾಗಲಿಲ್ಲ, ನಾವೀಗ ಒಂದು ಡಯಾಗ್ನಿಸ್ಟಿಕ್ ಬ್ಲಾಕ್​ ಆರಂಭಿಸಿದ್ದೇವೆ, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿಗೆ ಸಂಸದರಿಂದ ಏನಾದರೂ ಕೊಡುಗೆ ಸಿಕ್ಕಿತೆ? ವೈದ್ಯಕೀಯ ಸಚಿವರಾಗಿದ್ದರೂ ಆಡಳಿತಾತ್ಮಕ ಅನುಮೋದನೆ ಪಡೆಯುವುದು ಅವರಿಗೆ ಸಾಧ್ಯವಾಗಲಿಲ್ಲ ಎಂದು ಡಾ ಎಂಸಿ ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ, ಜೂನ್ 21: ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ಮತ್ತು ಸಂಸದ ಡಾ ಕೆ ಸುಧಾಕರ್ (Dr K Sudhakar) ಇಬ್ಬರೂ ಚಿಕ್ಕಬಳ್ಳಾಪುರದವರು, ವೈದ್ಯರು ಮತ್ತು ಸಕ್ರಿಯ ರಾಜಕಾರಣಿಗಳು. ಎಂಸಿ ಸುಧಾಕರ್ ಬೇರೆ ಪಕ್ಷಗಳ ನಾಯಕರ ಬಗ್ಗೆ ಮಾತಾಡುವುದು ಕಡಿಮೆ. ಆದರೆ ಸಂಸದ ಸುಧಾಕರ್ ನಿನ್ನೆ ರಾಜ್ಯ ಸರ್ಕಾರ ಐಸಿಯುನಲ್ಲಿದೆ ಅಂತ ಹೇಳಿದ್ದು ಸಚಿವನನ್ನು ಕೆರಳಿಸಿದೆ. ಇವತ್ತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಸಚಿವ, ಐಸಿಯು ಬಗ್ಗೆ ಮಾತಾಡಲು ಸಂಸದನಿಗೆ ನಾಚಿಕೆಯಾಗಬೇಕು, ಅವರು ರಾಜ್ಯದ ಆರೋಗ್ಯ ಸಚಿವರಾಗಿದ್ದಾಗ ಐಸಿಯುನಲ್ಲಿದ್ದ 23 ಜನ ಪ್ರಾಣ ಕಳೆದುಕೊಂಡಿದ್ದು ನಾಡಿನ ಜನತೆಗೆ ಗೊತ್ತಿದೆ, ಇವರ ಯೋಗ್ಯತೆಗೆ ನಂದಿನಿ ರೋಪ್​ವೇ ಯೋಜನೆಗೆ ಎಂಓಯು ಪಡೆಯಲಾಗಲಿಲ್ಲ, ಆದರೆ ತಮ್ಮ ಸರ್ಕಾರ ಅರಣ್ಯ ಇಲಾಖೆಯಿಂದ ಸಮ್ಮತಿ ಪಡೆದುಕೊಳ್ಳಲು ಪ್ರಯತ್ನ ನಡೆಸಿದೆ, ಅಪ್ಪರ್ ಟರ್ಮಿನಲ್ ಪಾಯಿಂಟ್ ಗೆ ಜಾಗ ಕೊಟ್ಟಿದೆ ಎಂದು ಹೇಳಿದರು.

ಇದನ್ನೂ ಓದಿ:  ನನ್ನ ಉತ್ತಮ ಸ್ನೇಹಿತ ಬಸನಗೌಡ ಯತ್ನಾಳ್ ಮಾತಾಡುವಾಗ ಹದ್ದು ಮೀರುತ್ತಿದ್ದಾರೆ: ಡಾ ಎಂಸಿ ಸುಧಾಕರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ